1990 ಮತ್ತು 2023ರ ನಡುವೆ ಪ್ರಕಟಗೊಂಡ ಸುಮಾರು 12 ಕತೆಗಳನ್ನೊಳಗೊಂಡ "ಹಾರ್ಟ್ ಲ್ಯಾಂಪ್" ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕತೆಗಳಲ್ಲಿ ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಅನಾವರಣಗೊಂಡಿದೆ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ. ತಮ್ಮ ಖುಷಿಯನ್ನು ಹಂಚಿಕೊಂಡಿರುವ ಮುಷ್ತಾಕ್, ಈ ಬಹುಮಾನವು ಕನ್ನಡ ಭಾಷೆಯ ನಿಜವಾದ ಸಾಮರ್ಥ್ಯವನ್ನು ತೋರಿಸಿದೆ. ಕನ್ನಡದ ಸಾಹಿತ್ಯ ಮತ್ತು ಹೆಚ್ಚಿನ ಕೃತಿಗಳನ್ನು ಇತರ ಭಾಷೆಗಳಿಗೆ, ಅದರಲ್ಲೂ ವಿಶೇಷವಾಗಿ ಇಂಗ್ಲಿಷ್‌ಗೆ ಅನುವಾದಿಸಿದರೆ ಏನೆಲ್ಲ ಗೌರವ ಸಿಗಬಹುದು ಎಂಬುದನ್ನು ಈ ಪ್ರಶಸ್ತಿ ನಿರೂಪಿಸಿದೆ ಎಂದರು.
ಇನ್ನು ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷ್ಗೆ ಅನುವಾದ ಮಾಡಿದ ಕೀರ್ತಿ ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಅವರಿಗೆ ಸಲ್ಲುತ್ತದೆ. ದೀಪಾ ಭಸ್ತಿ ಅವರು ಬಹುಮಾನವನ್ನು ಪಡೆಯಲು ಲಂಡನ್ನಿನ ಟೇಟ್ ಮಾಡರ್ನ್‌ನಲ್ಲಿ ಮುಷ್ತಾಕ್ ಅವರೊಂದಿಗೆ ಹಾಜರಿದ್ದರು.
ಹಾಸನ ಜಿಲ್ಲೆಯವರಾದ ಬಾನು ಮುಷ್ತಾಕ್, ವೃತ್ತಿಯಲ್ಲಿ ವಕೀಲೆ ಮತ್ತು ಪತ್ರಕರ್ತೆಯಾಗಿದ್ದು ಕವಿ, ಕಾದಂಬರಿಕಾರ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
0 Comments