ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ತೆರೆಯಲು ಈ ತಿಂಗಳು ಮಾತ್ರ ಅವಕಾಶ

ಭಾರತೀಯ ಅಂಚೆ ಇಲಾಖೆಯು ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ಎಂಬ ಹೊಸ ಯೋಜನೆಯನ್ನು ಪರಿಚಯಿಸಿತ್ತು. ಮಹಿಳೆಯರು ಖಾತೆಗಳನ್ನು ತೆರೆಯಲು ಮಾರ್ಚ್ 31.2025 ಕೊನೆಯ ದಿನವಾಗಿರುತ್ತದೆ.
ಭಾರತೀಯ ಅಂಚೆ ಇಲಾಖೆಯಲ್ಲಿ ಏಪ್ರಿಲ್ 1 20123ರಿಂದ ಈ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷಗಳ ಮಾನ್ಯತೆಯೊಂದಿಗೆ ಮಾರ್ಚ್ 31-2025ಕ್ಕೆ ಖಾತೆ ತೆರೆಯುವ ಸೌಲಭ್ಯ ಕೊನೆಗೊಳ್ಳುತ್ತದೆ. ಆಸಕ್ತ ಮಹಿಳೆಯರು ಈ ತಿಂಗಳ ಅಂತ್ಯದೊಳಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆಯನ್ನು ಆರಂಭಿಸಬಹುದಾಗಿದೆ. ಈ ಯೋಜನೆಯಡಿ ತಾತ ತೆರೆದ ಮಹಿಳಾ ಫಲಾನುಭವಿಗಳಿಗೆ 7.5% ಆಕರ್ಷಕ ಬಡ್ಡಿದರವನ್ನು ಅಂಚೆ ಇಲಾಖೆಯು ನೀಡುತ್ತದೆ. ಈ ಖಾತೆಯಲ್ಲಿ ಕನಿಷ್ಠ ಹೂಡಿಕೆ 1000ರೂ. ವಾಗಿದ್ದು ಗರಿಷ್ಠ ಹೂಡಿಕೆಯ ಮಿತಿಯು 2 ಲಕ್ಷವಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಖಾತೆ ತೆರೆಯಲು ಯಾವುದೇ ರೀತಿಯ ವಯಸ್ಸಿನ ನಿರ್ಬಂಧವಿರುವುದಿಲ್ಲ.
 



Post a Comment

0 Comments