ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ನಡೆದ ದಾಳಿಯಲ್ಲಿ ಬಿಎಸ್‌ಎಫ್ ಇನ್ಸ್ಪೆಕ್ಟರ್ ಇಮ್ತಿಯಾಜ್ ಹುತಾತ್ಮರಾಗಿದ್ದಾರೆ. ಜಮ್ಮುವಿನ ಆರ್.ಎಸ್. ಪುರದ ಗಡಿಯಲ್ಲಿ ಪಾಕ್ ದಾಳಿಗೆ ಯೋಧ ಹುತಾತ್ಮರಾಗಿದ್ದಾರೆ.
ಉಧಮ್ ಪುರ ಗಡಿಯಲ್ಲಿ ಭಾರತೀಯ ಸೇನೆಯ ಸುರೇಂದ್ರ ಸಿಂಗ್ ಮೋಗಾ ಎಂಬ ಯೋಧ ಹುತಾತ್ಮರಾಗಿದ್ದಾರೆ.ಕದನ ವಿರಾಮ ಘೋಷಣೆ ಮುನ್ನ ಶನಿವಾರ ಜಮ್ಮು ಮತ್ತು ಕಾಶ್ಮೀರದ ಉದಮ್ಪುರ ಜಿಲ್ಲೆಯ ವಾಯುನೆಲೆಯಲ್ಲಿ ಸೇನಾ ವಾಯು ರಕ್ಷಣಾ ಪಡೆಯು ಪಾಕ್ ಡ್ರೋನ್ ಹೊಡೆದುರುಳಿಸಿತು. ಈ ವೇಳೆ ಉಧಮ್ಪುರ ವಾಯುನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕರೊಬ್ಬರಿಗೆ ಡ್ರೋನ್ ಅವಶೇಷಗಳು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹುತಾತ್ಮ ಯೋಧರ ಬಲಿದಾನವನ್ನು ಭಾರತೀಯರಾದ ನಾವು ಎಂದೆಂದಿಗೂ ಮರೆಯುವಂತಿಲ್ಲ. ಅವರ ಆತ್ಮಕ್ಕೆ ಭಗವಂತನ ಆಶಿರ್ವಾದ ಸದಾ ಇರಲಿ..
0 Comments