ಜೆ.ಎನ್.ಸಿ.ಎ.ಎಸ್.ಆರ್ ನಲ್ಲಿ ಉದ್ಯೋಗಾವಕಾಶ..!!

ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಜೆ.ಎನ್.ಸಿ.ಎ.ಎಸ್.ಆರ್ ಖಾಲಿ ಇರುವ ಜೂನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮೇ 9ರೊಳಗೆ ಅರ್ಜಿ ಸಲ್ಲಿಸಬಹುದು. 
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಪದವಿ ಜೊತೆಗೆ, ಮೈಕ್ರೋಸಾಫ್ಟ್ ಹಾಗೂ ಆಟೊ ಕ್ಯಾಡ್ ತಂತ್ರಾಂಶಗಳಲ್ಲಿ ಪರಿಣತಿ ಪಡೆದಿದ್ದು, 35 ವರ್ಷದೊಳಗಿರಬೇಕು. ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯನ್ನು 35,400-1,20,400 ರೂಪಾಯಿ ನಿಗದಿಪಡಿಸಲಾಗಿದೆ. 

ಸ್ವೀಕೃತ ಅರ್ಜಿಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳೊಂದಿಗೆ ನೇಮಕಾತಿ ಹಂತದ ಕುರಿತು ಸಂವಹನ ನಡೆಸಲಾಗುತ್ತದೆ. 500 ರೂಪಾಯಿ ಅರ್ಜಿ ಶುಲ್ಕವಿದು ಮಹಿಳೆ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ. 

JNCASR.IN ವೆಬ್ಸೈಟ್ ಇಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ, ಅಂಚೆ ಲಕೋಟೆಯಲ್ಲಿ ಹುದ್ದೆಯ ಹೆಸರನ್ನು ನಮೂದಿಸಿ 'ದಿ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆ, ಜಕ್ಕೂರು, ಬೆಂಗಳೂರು-560064' ವಿಳಾಸಕ್ಕೆ ಮೇ 9ರ ಒಳಗಾಗಿ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments