ಸಿಎ ಪರೀಕ್ಷೆ ವೇಳಾಪಟ್ಟಿ ಪ್ರಕಟ..!

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ(ಐಸಿಎಐ) 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಿರುವ ಸಿಎಂ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಿಎ ಅಂತಿಮ ಪರೀಕ್ಷೆಗಳ ಗ್ರೂಪ್ 1ರ ಪರೀಕ್ಷೆಯು ಸೆಪ್ಟೆಂಬರ್ 3, 6 ಮತ್ತು 8ರಂದು ನಡೆಯಲಿದ್ದು, ಗ್ರೂಪ್ 2ರ ಪರೀಕ್ಷೆಗಳು ಸೆಪ್ಟೆಂಬರ್ 10, 12 ಮತ್ತು 14ರಂದು ನಡೆಯಲಿದೆ.

ಮೊದಲ ಗ್ರೂಪ್ ನ ಇಂಟರ್ ಮೀಡಿಯೇಟ್ ಪರೀಕ್ಷೆಗಳು ಸೆಪ್ಟೆಂಬರ್ 4, 7 ಮತ್ತು 9ರಂದು ನಡೆಯಲಿದ್ದು, ಗ್ರೂಪ್ 2 ಪರೀಕ್ಷೆಗಳು ಸೆಪ್ಟೆಂಬರ್ 11, 13 ಹಾಗೂ 15ರಂದು ನಡೆಯಲಿದೆ. ಫೌಂಡೇಶನ್ ಕೋರ್ಸ್ ಪರೀಕ್ಷೆಗಳು ಸೆಪ್ಟೆಂಬರ್ 16, 18 ಮತ್ತು 22ರಂದು ನಡೆಯಲಿವೆ.

ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳು ಪರೀಕ್ಷೆಯ ದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದರೆ ಪರೀಕ್ಷಾ ದಿನಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಐಸಿಎಐ ತಿಳಿಸಿದೆ. ದೇಶಾದ್ಯಂತ 318 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 

ಹೆಚ್ಚಿನ ಮಾಹಿತಿಗಾಗಿ ಐಸಿಎಐ ಅಧಿಕೃತ ವೆಬ್ಸೈಟ್ https://icai.org/ ಪರಿಶೀಲಿಸಬಹುದಾಗಿದೆ.

Post a Comment

0 Comments