1930ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಶ್ರೀನಿವಾಸನ್ ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಉನ್ನತ ವ್ಯಾಸಂಗ ಪಡೆದಿದ್ದರು. ನಮ್ಮ ದೇಶದ ಪರಮಾಣು ಯೋಜನೆಗೆ ಸಂಬಂಧಿಸಿದಂತೆ ಅನೇಕ ಪ್ರಾಜೆಕ್ಟ್ಗಳನ್ನು ಶ್ರೀನಿವಾಸನ್ ಪರಿಚಯಿಸಿದ್ದರು.
1955ರಲ್ಲಿ ಪರಮಾಣು ಇಂಧನ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ್ದ ಶ್ರೀನಿವಾಸನ್, ದೇಶದ ಖ್ಯಾತ ಪರಮಾಣು ವಿಜ್ಞಾನಿಯಾಗಿದ್ದ ಡಾ. ಹೋಮಿ ಭಾಬಾ ಅವರೊಂದಿಗೆ ಸೇರಿ ದೇಶದ ಮೊದಲ ಪರಮಾಣು ರಿಯಾಕ್ಟರ್ ಅಪ್ಸರಾ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. 1959ರಲ್ಲಿ ಮೊದಲ ಪರಮಾಣು ವಿದ್ಯುತ್ ಸ್ಥಾವರದ ನಿರ್ಮಾಣ ಯೋಜನೆಯ ಇಂಜಿನಿಯರಾಗಿ ಕೆಲಸ ಮಾಡಿದ್ದರು. ಅಬ್ಬಬ್ಬಾ 1967 ರಲ್ಲಿ ಮದ್ರಾಸ್ ಪರಮಾಣು ವಿದ್ಯುತ್ ಸ್ಥಾವರ ಯೋಜನಾ ಇಂಜಿನಿಯರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದ ಇವರು, ಅಣುಶಕ್ತಿ ಆಯೋಗದ ಇಂಜಿನಿಯರ್ ಹುದ್ದೆ, ಡಿಎಇಯ ವಿದ್ಯುತ್ ಯೋಜನೆಗಳ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕ, ಅಣು ವಿದ್ಯುತ್ ಮಂಡಳಿ ಅಧ್ಯಕ್ಷ, ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ, ಪರಮಾಣು ವಿದ್ಯುತ್ ನಿಗಮ ಲಿಮಿಟೆಡ್ ಎನ್‌ಪಿಸಿಐಎಲ್ ಸ್ಥಾಪಕ ಅಧ್ಯಕ್ಷರು ಸೇರಿದಂತೆ ಹಲವಾರು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ ಅನುಭವವೇ ವಿಜ್ಞಾನಿಯಾಗಿದ್ದರು.
ಇನ್ನು ಅವರು ದೇಶದ ಪರಮಾಣು ಇಂಧನ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಊಟಿ ಪ್ರವಾಸ ಕಾಗಿ ತೆರಳಿದ್ದ ವಿಜ್ಞಾನಿ ಶ್ರೀನಿವಾಸನ್ ಅವರು ಹಠಾತ್ತನೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
0 Comments