ಯುಗಾದಿ/ವಿಷು ಹಬ್ಬದ ಪ್ರಯುಕ್ತ "ನಾನು ಮತ್ತು ನನ್ನ ಗೀಚು ಬಳಗ"ದಿಂದ ಕಥಾ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ



ಯುಗಾದಿ,ವಿಷು ಹಬ್ಬದ ಪ್ರಯುಕ್ತ " ನಾನು ಮತ್ತು ನನ್ನ ಗೀಚು ಬಳಗ" ದ ವತಿಯಿಂದ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತ ಕಥೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
 ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರು ತಮ್ಮ ಕಥೆಗಳನ್ನು ಕಳುಹಿಸಿ ಕೊಡಲು ಕೊನೆಯ ದಿನಾಂಕ: 30-3-2025 ಆಗಿರುತ್ತದೆ.

ನಾನು ಮತ್ತು ನನ್ನ ಗೀಚು ವಾಟ್ಸಪ್ ಬಳಗದಲ್ಲಿರುವ ಸದಸ್ಯರು ಅದೇ ಬಳಗಕ್ಕೆ ಅಥವಾ ಸದಸ್ಯರಲ್ಲದವರು "9019941619" ವಾಟ್ಸಪ್ ಸಂಖ್ಯೆಗೆ ಕೊನೆಯ ದಿನಾಂಕದ ಒಳಗಾಗಿ ಕಳುಹಿಸಬೇಕು.

ಕಥಾ ಸ್ಪರ್ಧೆಯ ಫಲಿತಾಂಶ: ದಿನಾಂಕ 15-4-2025 ರಾತ್ರಿ 8 ಗಂಟೆಗೆ ಪ್ರಕಟಿಸಲಾಗುತ್ತದೆ.

ಕತೆಗಾರರು ಬರೆಯುವ ಕತೆಗಳಿಗೆ ಪದಗಳ ಮಿತಿಯಿದ್ದು, ಕನಿಷ್ಠ 500 ಪದಗಳು ಮತ್ತು ಗರಿಷ್ಟ ಮಿತಿ 1000 ಪದಗಳ ಒಳಗೊಂಡಿರಬೇಕು. ಕತೆಗೆ ವಿಷಯವನ್ನು ನೀಡಲಾಗಿದ್ದು "ಕಾಲಚಕ್ರ" ಎಂಬ ವಿಷಯವನ್ನು ಕಥಾ ವಸ್ತುವಾಗಿಟ್ಟುಕೊಂಡು ಕತೆ ಬರೆಯಬೇಕು.


ಕತೆಯನ್ನು ಬರೆಯುವವರು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

1. ಕಥೆ ಸ್ವಂತದ್ದಾಗಿದ್ದು, ಈ ವಿಶೇಷ ಸ್ಪರ್ಧೆಗೆಂದೇ ಬರೆದಿರಬೇಕು. 
2. ಕಥೆ ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು.
3. ಕಥೆ ನೀಡಿರುವ ವಿಷಯದ ಚೌಕಟ್ಟಿನಲ್ಲಿ ಇರಲಿ. ವೈವಿಧ್ಯ ಚಿಂತನೆಯಿಂದ ಕೂಡಿರಲಿ.   
4. ಕಥೆ ಆಕರ್ಷಕವಾಗಿದ್ದು, ಅರ್ಥಪೂರ್ಣ ಹಾಗೂ ಕುತೂಹಲ ಮೂಡಿಸುವಂತೆಯೂ ಇರಲಿ.
5. ನಿಮ್ಮ ಕಥೆಗೊಂದು ಸುಂದರ ಶೀರ್ಷಿಕೆ ಇರಲಿ. ಆದರೆ ನೀಡಿದ ವಿಷಯವನ್ನೇ ಶೀರ್ಷಿಕೆಯನ್ನಾಗಿಸಬೇಡಿ.
6. ಪದಗಳನ್ನು ಬಿಡಿ ಬಿಡಿಯಾಗಿ ಬರೆದಿರಬೇಕು. ಇಲ್ಲಿ ನೀವು ಪ್ರತ್ಯೇಕವಾಗಿ ಬರೆಯುವ ಪ್ರತಿ ಅಕ್ಷರಗಳನ್ನೂ ಪದವೆಂದು ಪರಿಗಣಿಸಲಾಗುತ್ತದೆ.
7. ಕನ್ನಡ ಪದ, ಕನ್ನಡ ಭಾಷೆಯ ಬಳಕೆ; ಅಕ್ಷರ ದೋಷ, ವ್ಯಾಕರಣದ ಕಡೆ ಹೆಚ್ಚಿನ ಗಮನ ನೀಡಿ.
8. ಸ್ಪರ್ಧೆಗೆ ಕಥೆ ಕಳುಹಿಸುವಾಗ 'ಯುಗಾದಿ ವಿಷು ವಿಶೇಷ'- 'ಗೀಚು ಕಥಾ ಸ್ಪರ್ಧೆಗಾಗಿ' ಅಂತ ನಮೂದಿಸಿರತಕ್ಕದ್ದು. 
9. ಬರಹಗಳು ಟೈಪಿಸಿರಬೇಕು ಹಾಗೂ ಕೊನೆಯಲ್ಲಿ ನಿಮ್ಮ ಹೆಸರು, ಊರು, (ಜಿಲ್ಲೆ) ನಮೂದಿಸಬೇಕು.
10. ಪಿಡಿಎಫ್ ರೂಪದಲ್ಲಿ ಕಳುಹಿಸುವ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
11. ನಿಯಮ ಮೀರಿದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
12. ಸ್ಪರ್ಧೆ, ತೀರ್ಪು, ಬರಹಗಳಿಗೆ ಅನಗತ್ಯ ವಿಮರ್ಶೆ ಮಾಡದಿರಿ.
13. ಸ್ಪರ್ಧೆಯಲ್ಲಿ ಬಂದ ಬರಹಗಳಲ್ಲಿ ನಿಷ್ಪಕ್ಷಪಾತವಾಗಿ ಒಟ್ಟು ಹತ್ತು ಕಥೆಗಳನ್ನು ಆಯ್ಕೆ ಮಾಡಿ ಅತ್ಯುತ್ತಮ ಐದು ಕಥೆಗಳಿಗೆ ತಲಾ ರೂ. 1000/- ನಗದು ಬಹುಮಾನ ಹಾಗೂ ಉತ್ತಮ ಐದು ಕಥೆಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು. 
14. ಸ್ಪರ್ಧೆಗೆ ಸಂಬಂಧಿಸಿದಂತೆ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.


ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಹಗಾರರು ಭಾಗವಹಿಸಿ ಸ್ಪರ್ಧೆಯನ್ನು ಅರ್ಥಪೂರ್ಣವಾಗಿ ನಡೆಸುವಲ್ಲಿ ಸಹಕಾರ ನೀಡಬೇಕು ಎಂದು 'ನಾನು ಮತ್ತು ನನ್ನ ಗೀಚು ಸಾಹಿತ್ಯ ಬಳಗ'ದ ನಿರ್ವಾಹಕರು / ತೀರ್ಪುಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments