ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಟೈಪ್-2: ಸಿಬಿಎಸ್ಇ ಶಾಲೆಗಳಲ್ಲಿನ್ನು ಶುಗರ್ ಬೋರ್ಡ್ ಸ್ಥಾಪನೆ..!!

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಮಧುಮೇಹ ಟೈಪ್-2 ಸಮಸ್ಯೆ ಹೆಚ್ಚುತ್ತಿದೆ.  ಇಂದಿನ ದಿನಗಳಲ್ಲಿ ಪುಟ್ಟ ಮಕ್ಕಳು ಹೆಚ್ಚಾಗಿ ಸಿಹಿತಿಂಡಿ, ಫಿಜ್ಜಾ, ಬರ್ಗರ್ ನಂತಹ ಆಹಾರ ಸೇವನೆ, ತಂಪು ಪಾನೀಯ ಸೇರಿದಂತೆ ಅನಾರೋಗ್ಯಕರ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈ ಮಧುಮೇಹ ಸಮಸ್ಯೆಯು ಬಹುಬೇಗನೆ ಮಕ್ಕಳನ್ನು ಆವರಿಸಿತ್ತಿದೆ. ಈ ಹಿನ್ನೆಲೆಯಲ್ಲಿ ಮಧುಮೇಹ ನಿಯಂತ್ರಣಕ್ಕಾಗಿ ಸಿಬಿಎಸ್ಇ ಶಾಲೆಗಳಲ್ಲಿ ಶುಗರ್ ಬೋರ್ಡ್ ಸ್ಥಾಪಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಮಕ್ಕಳಲ್ಲಿನ ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅತಿಯಾದ ಸಕ್ಕರೆ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದಿನ ಕಥೆಯನ್ನು ನೋಡಿದಾಗ ಕೇವಲ ನಮ್ಮ ಹಿರಿಯ ವಯಸ್ಸಿನ ಜನರಲ್ಲಿ ಮಾತ್ರ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೇ ಟೈಪ್-1 ಮಧುಮೇಹ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದಕ್ಕೆಲ್ಲ ಮೂಲ ಕಾರಣ ಅತಿಯಾದ ಸಕ್ಕರೆ ಸೇವನೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಸಕ್ಕರೆ ಮಿಶ್ರಿತ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ಐಸ್ ಕ್ರೀಮ್, ಮತ್ತು ಸಂಸ್ಕರಿತ ಆಹಾರಗಳು ಶಾಲಾ ಆವರಣಗಳಲ್ಲಿಯೇ ಮಕ್ಕಳಿಗೆ ಸುಲಭವಾಗಿ ಸಿಗುತ್ತಿದ್ದು ಇದು ಮಧುಮೇಹದ ಪ್ರಮಾಣ ಹೆಚ್ಚಾಗಲು ಒಂದು ಕಾರಣವಾಗಿದೆ. 

ಅಧ್ಯಯನದ ಪ್ರಕಾರ ನಾಲ್ಕರಿಂದ ಹತ್ತು ವರ್ಷದೊಳಗಿನ ಮಕ್ಕಳ ನಿತ್ಯದ ಶೇಕಡ 13 ಮತ್ತು 11ರಿಂದ 18 ವರ್ಷದೊಳಗಿನ ನಡುವಿನ ಮಕ್ಕಳ ಶೇಕಡ 15ರಷ್ಟು ಕ್ಯಾಲರಿಗೆ ಸಕ್ಕರೆ ಸೇವನೆಯೇ ಮೂಲ ಕಾರಣವಾಗಿದೆ. ಆದರೆ ಮಕ್ಕಳಿಗೆ ಈ ಪ್ರಮಾಣ ಶೇಕಡ ಐದರಷ್ಟು ಮಾತ್ರ ಇರಬೇಕು. 

ಈ ಹಿನ್ನಲೆಯಲ್ಲಿ ಪ್ರತಿ ಶಾಲೆಗಳು ತಮ್ಮ ಆವರಣದಲ್ಲಿ ಶುಗರ್ ಬೋರ್ಡ್ ಹಾಕಬೇಕು. ಈ ಬೋರ್ಡ್ ಮೂಲಕ ಅತಿಯಾದ ಸಕ್ಕರೆ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಮಾಹಿತಿಯನ್ನು ಪ್ರಕಟಿಸಬೇಕು. ಈ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಿಬಿಎಸ್ಇಯು ಪ್ರಾಂಶುಪಾಲರಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಪ್ರಕಟಣೆ ಮಾಡಿದೆ.

ಶುಗರ್ ಬೋರ್ಡ್ ನಲ್ಲಿ ಏನೇನು ಮಾಹಿತಿಗಳಿರಬೇಕು?
1. ಪ್ರತಿನಿತ್ಯ ಮಕ್ಕಳು ಸೇವಿಸುವ ಆಹಾರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟಿರಬೇಕು? 
2. ಸಾಮಾನ್ಯವಾಗಿ ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು ಯಾವುವು?  
3.ಹೆಚ್ಚಿನ ಸಕ್ಕರೆ ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳು ಬಗ್ಗೆ ಮಾಹಿತಿ
4. ಆರೋಗ್ಯಕರ ಪರ್ಯಾಯ ಆಹಾರಗಳಿಗೆ ಸಂಬಂಧಿಸಿದಂತಹ ಮಾಹಿತಿ 

ಈ ರೀತಿ ಮಧುಮೇಹ ರೋಗಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ಶುಗರ್ ಬೋರ್ಡ್ ನಲ್ಲಿ ಪ್ರಕಟಿಸುತ್ತಿದ್ದರೆ ಮಕ್ಕಳಲ್ಲಿ ಜಾಗೃತಿ ಮೂಡಲು ಸಹಾಯವಾಗುತ್ತದೆ. ಇದರ ಜೊತೆಗೆ ಮಕ್ಕಳಲ್ಲಿ ಸಕ್ಕರೆ ಸೇವನೆಗೆ ಸಂಬಂಧಿಸಿದ ‌ಜಾಗೃತಿ ಉಪನ್ಯಾಸ, ಕಾರ್ಯಾಗಾರ ಆಯೋಜಿಸುವಂತೆಯೂ ಸೂಚಿಸಲಾಗಿದೆ.


Post a Comment

0 Comments