ಭಾರತದಲ್ಲಿನ ಸೂಕ್ಷ್ಮ ಮತ್ತು ವಿವಾದಿತ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಕರೆ ಮತ್ತು ಇಂಟರ್ನೆಟ್ ಸೇವೆಗಳನ್ನು ರದ್ದುಪಡಿಸಲು ಅನುಕೂಲವಾಗುವಂತೆ ಕಮಾನ್ ಸೆಂಟರ್ ಅನ್ನು ಭಾರತದಲ್ಲಿ ಸ್ಥಾಪಿಸಬೇಕು ಹಾಗೂ ಕರೆ ಕದ್ದಾಲಿಸಲು ಅವಕಾಶ ಮಾಡಿಕೊಡಬೇಕು ಎಂಬ ಎರಡು ಮಹತ್ವದ ಷರತ್ತುಗಳನ್ನು ಕೇಂದ್ರ ಸರಕಾರ ಸ್ಟಾರ್ ಲಿಂಕಿಗೆ ವಿಧಿಸಿದೆ.
ಕಂಟ್ರೋಲ್ ಸೆಂಟರ್ ಸ್ಥಾಪನೆ ಎಂಬುದು ಭಾರತದ ಪಾಲಿಗೆ ಮಹತ್ವದ್ದಾಗಿದೆ. ದೇಶಕ್ಕೆ ಎದುರಾಗುವ ತುರ್ತು ಸಂದರ್ಭಗಳಲ್ಲಿ ಸರಕಾರವು ಕೆಲ ಪ್ರದೇಶಗಳಲ್ಲಿ ತಕ್ಷಣ ಸಟಲೈಟ್ ಸಂಮೋಹನ ಸೇರಿ ಎಲ್ಲಾ ರೀತಿಯ ಸಂವಹನ ಸೇವೆಗಳನ್ನು ನಿರ್ಭಂಧಿಸಬೇಕಾಗುವ ಅನಿವಾರ್ಯತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಸ್ಟಾರ್ ಲಿಂಕನ ಬಾಗಿಲು ಪಡೆಯುವ ಅಥವಾ ಅಮೆರಿಕದಲ್ಲಿನ ಮುಖ್ಯ ಕಚೇರಿಗೆ ಮನವಿ ಮಾಡುವ ಪ್ರಮೇಯ ಎದುರಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಭಾರತ ತನ್ನ ನೆಲದಲ್ಲಿ ಕಂಟ್ರೋಲ್ ಸೆಂಟರ್ ಸ್ಥಾಪನೆ ಮಾಡಬೇಕಾಗುವುದು ಅತ್ಯುತ್ತಮ ಹೆಜ್ಜೆಯಾಗಿದೆ.
ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಕಾನೂನು ಪಾಲನಾ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ಮನವಿ ಸಲ್ಲಿಸಿದಾಗ ದೂರವಾಣಿ ಕರೆಗಳ ಕದ್ದಾಳಿಕೆಗೂ ಅವಕಾಶ ನೀಡಬೇಕು ಎಂದು ಕೇಂದ್ರ ಸರಕಾರ ಮತ್ತೊಂದು ಷರತ್ತನ್ನು ವಿಧಿಸಿದೆ.
ಭಾರತದ ಈ ಮನವಿಯನ್ನು ಸ್ಟಾರ್ ಲಿಂಕ್ ಸಂಸ್ಥೆ ಪರಿಶೀಲಿಸುವುದಾಗಿ ಹೇಳಿದ್ದು, ಭಾರತದ ಷರತ್ತಿನ ಅನ್ವಯ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬ ಭರವಸೆ ಇದೆ. ಭಾರತೀಯ ಟೆಲಿಕಾಂ ಕಾಯ್ದೆಯಡಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ಅಥವಾ ನೆಟ್ವರ್ಕ್ ಅನ್ನು ಸಾರ್ವಜನಿಕ ತುರ್ತು ಪರಿಸ್ಥಿತಿ ವೇಳೆ ಜನರ ಹಿತದೃಷ್ಟಿಯಿಂದ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ.
0 Comments