ಈಗಾಗಲೇ ಪಾಕಿಸ್ತಾನದಲ್ಲಿ ನಾಗರಿಕರು ಎಟಿಎಂನಿಂದ ಕೇವಲ 3000 ಮಾತ್ರ ಹಿಂಪಡೆಯಲು ಪಾಕ್ ಸರ್ಕಾರ ಸೂಚನೆ ನೀಡಿದೆ. ಈ ನಿರ್ಧಾರದಿಂದ ಕಂಗೆತ್ತಿರುವ ನಾಗರಿಕರು ಹಣಕ್ಕಾಗಿ ಪರದಾಡುವಂತಾಗಿದೆ. ಬ್ಯಾಂಕ್ ಖಾತೆಗಳಲ್ಲಿ ತಮ್ಮ ಹಣವಿದ್ದರೂ ಹಿಂಪಡೆಯಲಾಗದ ಹೀನ ಪರಿಸ್ಥಿತಿ ಪಾಕ್ ನಾಗರಿಕರದ್ದಾಗಿದೆ.
ಪಾರ್ಕ್ ಸರ್ಕಾರವು ಹಣದ ಸಹಾಯ ನೀಡುವಂತೆ ವಿಶ್ವ ಬ್ಯಾಂಕ್ ಮೊರೆ ಹೋಗಿದೆ. ಮಿತ್ರ ರಾಷ್ಟ್ರಗಳಲ್ಲಿಯೂ ಹಣದ ಸಹಾಯ ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡುವಂತೆ ಪಾಕ್ ಅಂಗಲಾಚಿದೆ.
ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮತ್ತು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ಮಾಡುತ್ತಿರುವುದರಿಂದ, ಪಾಕಿಸ್ತಾನ ಸರ್ಕಾರವು ಹೆಚ್ಚಿನ ನಷ್ಟ ಅನುಭವಿಸುತ್ತಿದೆ. ಈ ಸಂಬಂಧ ಸಾಲಗಳನ್ನು ಒದಗಿಸುವಂತೆ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಪಾಕಿಸ್ತಾನ ಸರ್ಕಾರವು ಮನವಿ ಮಾಡಿದೆ. ಷೇರುಗಳು ಕುಸಿಯುತ್ತಿರುವುದರಿಂದ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಅಂತರರಾಷ್ಟ್ರೀಯ ಪಾಲುದಾರರಿಗೆ ಅದು ಮನವಿ ಮಾಡಿದೆ.
ಭಾರತದ ಸೇನಾ ದಾಳಿಯಿಂದ ಪಾಕಿಸ್ತಾನಕ್ಕೆ ತೀವ್ರ ನಷ್ಟವಾಗಿದೆ. ಪಾಕಿಸ್ತಾನವು ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಮಾರುಕಟ್ಟೆ ಕುಸಿತದ ಮಧ್ಯೆ, ಸೇನಾ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ನಾವು ಅಂತರರಾಷ್ಟ್ರೀಯ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ನೆರವು ನೀಡುವಂತೆ ಒತ್ತಾಯಿಸುತ್ತೇವೆ' ಎಂದು ಟ್ವೀಟ್ ಮಾಡಿದೆ.
0 Comments