ಕೇಂದ್ರ ಸರ್ಕಾರವು ತನ್ನ ಮೂರು ಶಸ್ತ್ರ ಪಡೆಗಳಿಗೆ ತುರ್ತು ಖರೀದಿಯ ಅಧಿಕಾರವನ್ನು ನೀಡಿದೆ. ಈ ಮೂಲಕ ಎಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಕಾರ್ಯವಿಧಾನವನ್ನು ಅನುಸರಿಸಿದ್ದು, ಜಗತ್ತಿಗೆ ಸಂದೇಶವನ್ನೂ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಯುದ್ಧದ ಸಂದರ್ಭದಲ್ಲಿ ಶಸ್ತ್ರ ಪಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಕ್ಷಣಾ ಸಚಿವರ ಅಡಿಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು ಸಶಸ್ತ್ರ ಪಡೆಗಳಿಗೆ ಆರ್ಥಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದೆ. ಇದು ಸೇನಾಪಡೆಗಳಿಗೆ ಆರು ತಿಂಗಳವರೆಗೆ ನೇರ ಖರೀದಿಯ ಶಕ್ತಿಯನ್ನು ನೀಡುತ್ತದೆ.
0 Comments