ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು 650ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಸತ್ಯನಾರಾಯಣ ಬೇಳೆರಿ ಅವರ ಮನೆಗೆ ಹೋಗಿದ್ದೆ, ನಿಜಕ್ಕೂ ಕಠಿಣವಾದ ಸಾಹಸವನ್ನೇ ಮಾಡುತ್ತಿದ್ದಾರೆ..ಇರುವ ತಮ್ಮ ಸಣ್ಣ ಜಾಗದಲ್ಲಿ ವಿವಿಧ ತಳಿಯ ಭತ್ತವನ್ನು ಉಳಿಸಿ ಭಾರತದ ಹಲವು ವಿಶ್ವವಿದ್ಯಾನಿಲಯಗಳಿಗೆ ಉಚಿತವಾಗಿ ಕಳುಹಿಸುತ್ತಿದ್ದಾರೆ. ಅನೇಕ ನಶಿಸಿ ಹೋಗಿರುವ ತಳಿಗಳು ಕೂಡ ಇಲ್ಲಿವೆ..ಈ ಕಾಯಕ ಮಾಡಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಸತ್ಯನಾರಾಯಣ ಬೇಳೆರಿ
ಸರ್ಕಾರದಿಂದ ಅಥವಾ ಖಾಸಗೀ ಸಂಸ್ಥೆಗಳ ಯಾವುದೇ ಸಹಕಾರವಾಗಲಿ ಇಲ್ಲದೇ ಏಕಾಂಗಿಯಾಗಿ ಭತ್ತದ ತಳಿಗಳನ್ನು ಉಳಿಸುವ ಹೋರಾಟ ಮಾಡುತ್ತಲೇ ಇದ್ದಾರೆ...ಈ ಅಮೂಲ್ಯ ತಳಿಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎನ್ನುವಾಗ ಅವರ ಮುಗ್ಧ ಮನಸ್ಸಿನ ತೊಳಲಾಟ ಜೊತೆಗೆ ಹೋರಾಟ ಕಣ್ಣಿಗೆ ಕಟ್ಟುವಂತದ್ದು.. ನೆಟ್ಟಣಿಗೆ ಕಡೆ ಹೋದಾಗ ಮಾತನಾಡಿಸಿ ಭತ್ತದ ತಳಿಗಳ ಕುರಿತು ತಿಳಿಯಲು ಮರೆಯಾಬೇಡಿ..
ನಾನಂತೂ ಭತ್ತದ ಕೆಲವು ತಳಿಗಳನ್ನು ತಂದಿರುವೆ ಬೆಳೆಸುವ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನ ಮಾಡುತ್ತೇನೆ.. ನೀವು ಕೂಡ ಆಸಕ್ತಿ ಇದ್ದಲ್ಲಿ ಉಚಿತವಾಗಿ ಭತ್ತದ ತಳಿಗಳನ್ನು ತಂದು ಸಂರಕ್ಷಣೆ ಮಾಡಬಹುದು ಇದರಿಂದ ಆ ಒಂದು ತಳಿಯ ಇಡೀಯ ಸಂತತಿಯನ್ನು ಅದರ ಜೊತೆಗೆ ಬೆಸೆದುಕೊಂಡ ಸಂಸ್ಕೃತಿಯನ್ನು ಉಳಿಸಿದ ಪುಣ್ಯ ಖಂಡಿತ ಸಿಗುತ್ತದೆ.. ಮುಂದೆ ಈ ತಳಿಗಳನ್ನು ನೋಡಲು ಕಷ್ಟಸಾಧ್ಯ..
ಪದ್ಮಶ್ರೀ ಸತ್ಯನಾರಾಯಣ ಬೇಳೆರಿ ಅವರು ನಮ್ಮ ನಡುವಿನ ಅಪರೂಪದ ಕೃಷಿಕರು ಹೋರಾಡುತ್ತಾ ಭತ್ತದ ತಳಿಗಳನ್ನು ಸಂರಕ್ಷಿಸುವ ಅವರ ಕಾರ್ಯ ಸದಾ ಸ್ಮರಣೀಯ ಹಾಗೂ ಪ್ರತಿಯೊಬ್ಬರು ಗೌರವಿಸಬೇಕಾದ ಸಂಗತಿ...ಅವರ ಕಾಳಜಿ ಪರಿಶ್ರಮ ನಮಗೆ ಪ್ರೇರಣೆ..
- ಪ್ರಣವ ಭಟ್

.jpeg)
.jpeg)
0 Comments