ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಕಾಲ ಹಣಕಾಸು ನೀತಿ ಸಭೆ ನಡೆದಿತ್ತು. ಈ ಹಣಕಾಸು ನೀತಿ ಸಭೆಯಲ್ಲಿ ಆರ್ಥಿಕ ವಿಕಸನ ಮತ್ತು ಆರ್ಥಿಕ ಬೆಳವಣಿಗೆಯ ಕುರಿತು ಚರ್ಚೆ, ಪರಾಮರ್ಶೆಗಳನ್ನು ನಡೆಸಿದ ನಂತರ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಇಳಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಏಪ್ರಿಲ್ ನಲ್ಲಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ಸ್ ಗಳಷ್ಟು ಇಳಿಕೆ ಮಾಡಲಾಗಿದ್ದು, ಇದೀಗ ಸತತ ಮೂರನೇ ಬಾರಿ ಆರ್ ಬಿಐ ರೆಪೋ ದರ ಇಳಿಕೆ ಮಾಡುವ ಮೂಲಕ ಬಡ್ಡಿದರದ ಹೊರೆಯನ್ನು ಇಳಿಕೆ ಮಾಡಿದಂತಾಗಿದೆ. ಇದರಿಂದಾಗಿ ಗೃಹ ಮತ್ತು ವಾಹನ ಸಾಲಗಾರರಿಗೆ ಬಡ್ಡಿ ದರದ ಹೊರೆ ಮತ್ತಷ್ಟು ಕಡಿಮೆಯಾಗಲಿದೆ.
0 Comments