ಭಾರತದ ಗಡಿ ನುಸುಳಲು ಪ್ರಯತ್ನಿಸಿದ 7 ಉಗ್ರರ ಹತ್ಯೆ..!!

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ನಡೆಯುತ್ತಿರುವ ಸಂದರ್ಭದಲ್ಲಿ ಭಯೋತ್ಪಾದಕರು ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದು, ಈ ಉಗ್ರರನ್ನು ಗಡಿ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಸಾಂಬಾ ಸೆಕ್ಟರ್‌ನಲ್ಲಿ, ಮೇ 8ನೇ ತಾರೀಖಿನ ಮಧ್ಯರಾತ್ರಿ, ಭಯೋತ್ಪಾದಕರ ದೊಡ್ಡ ಗುಂಪಿನಿಂದ ಒಳನುಸುಳುವಿಕೆ ಪ್ರಯತ್ನವನ್ನು ನಡೆಸಲಾಗಿದೆ. ಉಗ್ರರು ಈ ಪ್ರಯತ್ನವನ್ನು ಕಣ್ಗಾವಲು ಗ್ರಿಡ್ ಪತ್ತೆ ಮಾಡಿದೆ. ಈ ಒಳನುಸುಳುವಿಕೆ ಪ್ರಯತ್ನಕ್ಕೆ ಪಾಕ್ ರೇಂಜರ್ಸ್ ಪೋಸ್ಟ್ ಧಂಧರ್‌ನಿಂದ ಗುಂಡಿನ ದಾಳಿ ನಡೆಸಿತು.

ಉಗ್ರರು ಭಾರತಕ್ಕೆ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿರುವುದು ಬಿಎಸ್‌ಎಫ್‌ ಯೋಧರ ಗಮನಕ್ಕೆ ಬಂದಿದ್ದು, ತಕ್ಷಣ ಈ ಯೋಧರು ಒಳನುಸುಳುವಿಕೆ ಪ್ರಯತ್ನವನ್ನು ತಡೆದಿದ್ದಾರೆ. ಈ ವೇಳೆ ಯೋಧರು 7 ಜೈಶ್ ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅಲ್ಲದೇ ಪಾಕ್ ಪೋಸ್ಟ್ ಧಂಧರ್‌ಗೆ ವ್ಯಾಪಕ ಹಾನಿಯನ್ನುಂಟುಮಾಡಿದವು.

Post a Comment

0 Comments