ಜೇಡ್ಲ ಗೋಶಾಲೆ ನಿಜಕ್ಕೂ ಭೂಲೋಕದ ಸ್ವರ್ಗವೇ ಹೌದು... ಸುತ್ತಲೂ ಸಂಪಾಜೆಯ ಅರಣ್ಯ ಪ್ರದೇಶದ ಮೇಲೆ ಗಿಡಗಳು ಬೆಟ್ಟ ಗುಡ್ಡಗಳು ನಡುವೆ 80 ದನಗಳಿರುವ ಅದರಲ್ಲೂ ಎಲ್ಲವೂ ಮಲೆನಾಡು ಗಿಡ್ಡ ತಳಿಯ ಬಹಳ ವಿಶೇಷವಾದ ಗೋಶಾಲೆ..ಅಬ್ಬಾ ಅಧ್ಬುತ ಅನುಭವ
128 ವರುಷಗಳ ಹಳೆಯ ಮನೆ ಮೊದಲಿಂದಲೂ ದೇವಕಿ ಅಮ್ಮ ಎಂಬುವವರು ಆ ಮನೆಯಲ್ಲಿ 80 ದನಗಳನ್ನು ನೋಡಿಕೊಳ್ಳುತ್ತಿದ್ದರು ನಂತರ ಮಗ ಮೇಜರ್ ವೆಂಕಟ್ರಮಯ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಕೆಲ ಕಾಲ ಬದುಕಿದ್ದರು ಅವರು ಅಗಲಿಕೆ ಬಳಿಕ ಮದುವೆಯಾಗದ ಕಾರಣ ಇಷ್ಟು ಗೋವುಗಳನ್ನು ನೋಡಿಕೊಳ್ಳುವುದು ಯಾರು ಎಂಬ ಪ್ರಶ್ನೆ ಬಂದಾಗ ನೆರವಿಗೆ ಬಂದಿದ್ದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಇವತ್ತು ಈ ಗೋಶಾಲೆಯನ್ನು ಮಠವು ಬಹಳ ಸುಂದರವಾಗಿ ನಡೆಸುತ್ತಿದೆ..
ಇಂತಹ ಅನೇಕ ಗೋಶಾಲೆಗಳು ಸಾವಿರಾರು ಗೋವಿನ ಉಳಿವಿಗೆ ಕಾರಣ ರಾಮಚಂದ್ರಾಪುರ ಮಠ ಎಂದರೆ ತಪ್ಪಾಗಲಾರದು.. ಗೋಶಾಲೆ ನೋಡಿಕೊಳ್ಳುವುದು ಎಂದರೆ ಸುಲಭವಿಲ್ಲ ತಿಂಗಳಿಗೆ 2 ಲಕ್ಷ ರೂಪಾಯಿಯಷ್ಟು ಖರ್ಚು ವೆಚ್ಚಗಳಿವೆ..ದಾನಿಗಳಿಂದಲೇ ಗೋಶಾಲೆ ನಡೆಯುತ್ತಿದೆ.. ಜೊತೆಗೆ ತಾವೇ ಗೋವಿನ ಉತ್ಪನ್ನಗಳನ್ನು ತಯಾರಿಸಿ ಸ್ವಾವಲಂಬಿ ಆಗಲು ಪ್ರಯತ್ನ ಮಾಡುತ್ತಿರುವುದು ಮಾದರಿ
ಹಳೆಯ ಮನೆಯ ಗೋಡೆಗಳಲ್ಲಿ ಇರುತ್ತಿದ್ದದು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಎಂಬುದಕ್ಕೆ ಈ ಮನೆ ಸಾಕ್ಷಿ...ಹಾಗೇ ಈ ಗೋಶಾಲೆಯ ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿ ಪ್ರಕೃತಿ ಜೊತೆ ನೀವು ವಾಸ್ತವ್ಯ ಹೂಡಬಹುದು... ಒಂದು ದಿನ ಪೂರ್ತಿ ಇದ್ದು ಗೋವುಗಳು ಪ್ರಕೃತಿ ಜೊತೆ ಆನಂದಿಸಬಹುದು..ಊಟ, ತಿಂಡಿ ಎಲ್ಲಾ ವ್ಯವಸ್ಥೆ ಇದೆ.. ನೀವು ನೀಡಿದ ವಾಸ್ತವ್ಯದ ಹಣ ಗೋವಿಗಾಗಿ ಗೋಸೇವೆಗಾಗಿ ಮಿಸಲು.
ದಯವಿಟ್ಟು ಸಂಪಾಜೆಯ ಪ್ರಕೃತಿ ನಡುವಿನ ಗೋಶಾಲೆಗೆ ನೀವು ಭೇಟಿ ನೀಡಲೇಬೇಕು..ಗೋವಿನ ಜೊತೆ ಸಮಯ ಕಳೆಯಲು ಅವಕಾಶ ಗೋಸೇವೆ ನಿಮ್ಮ ಸೌಭಾಗ್ಯ..ಹಾಗೇ ಭೇಟಿ ನೀಡಿ ವಾಸ್ತವ್ಯ ಹೂಡಬೇಕು ಎಂದು ಇರುವವರು ಗೋಶಾಲೆಗೆ ದಾನಿಗಳು Contact : +91 9447400114, 9481979526
ಪರಿಸರದ ಜೊತೆ ಪ್ರೀತಿಯಿಂದ ಗೋಸೇವೆಯ ಮೂಲಕ ಒಂದು ದಿನ ಕಳೆಯೋಣ...

.jpeg)

0 Comments