ಮಂಗಳೂರಿಗೆ ಸಂತಸ ಸುದ್ದಿ: ನಾಳೆ Bhat'n'Bhat ನೂತನವಾದ 2ನೇ ಮಳಿಗೆ ಉದ್ಘಾಟನೆ...

ತಮ್ಮದೇ ಆದ ಶೈಲಿಯ ಮೂಲಕ ಮಾತನಾಡುತ್ತಾ ಪಾರಂಪರಿಕ ಅಡುಗೆಗಳ ವಿಡಿಯೋ ಮಾಡುವ ಮೂಲಕ ಮನೆಮಾತದ ಅಣ್ಣ ತಮ್ಮ ಸುದರ್ಶನ್ ಭಟ್ ಬೆದ್ರಡಿ (Sudarshan Bhat Bedradi) ಹಾಗೂ ಮನೋಹರ ಭಟ್ ಬೆದ್ರಡಿ (Manohar Bhat Bedradi) ತಮ್ಮ ಪರಿಶ್ರಮದಿಂದ ಆರಂಭಿಸಿದ ಶುದ್ಧ ತಿನಿಸುಗಳ ಉದ್ಯಮ ಇಂದು ಯಶಸ್ವಿಯಾಗಿ ಮಂಗಳೂರಿನಲ್ಲಿ 2ನೇ ಮಳಿಗೆ ಉದ್ಘಾಟನೆಗೊಳ್ಳಲಿದೆ..


ಸುದರ್ಶನ್ ಭಟ್ ಬೆದ್ರಡಿ ಕರ್ನಾಟಕದ ಮೂಲೆ ಮೂಲೆಗಳ ಅಡುಗೆ ಮನೆ ತಲುಪಿದ ಅಪರೂಪದ ಪ್ರತಿಭೆ ಅವರ ವಿಡಿಯೋಗಳೇ ವಿಶಿಷ್ಟ ಹಾಗೂ ವಿಭಿನ್ನ ಅವರನ್ನು ಪ್ರೀತಿಸುವ ಜನರು ಅನೇಕ.. ಸರಳ ವ್ಯಕ್ತಿತ್ವದ ಸುದರ್ಶನ್ ಭಟ್ ಬೆದ್ರಡಿ ಜೊತೆ ಅವರ ಮಡದಿಯಾದ ಕೃತಿ ಅವರು ಸೇರಿಕೊಂಡು Bhat'n'Bhat ಕರಾವಳಿಯ ಅತೀ ಹೆಚ್ಚು ಬೇಡಿಕೆಯ ಬ್ರೆಂಡ್ ಆಗಿ ಬೆಳೆದಿರುವುದು ನಿಜಕ್ಕೂ ಶ್ಲಾಘನೀಯ...

ಮಂಗಳೂರಿನಲ್ಲಿ ಸಿಹಿಕಹಿ ಚಂದ್ರು ಅವರು ಕುದ್ರೋಳಿ ಬಳಿ 2ನೇ ಮಳಿಗೆಯನ್ನು ಬೆಳಗ್ಗೆ  10.30 ಗೆ ಉದ್ಘಾಟನೆ ಮಾಡಲಿದ್ದಾರೆ.. ಎಲ್ಲರೂ ಭೇಟಿ ನೀಡಿ ಪ್ರೀತಿಯಿಂದ ಪ್ರೋತ್ಸಾಹಿಸಿ ಹಾಗೂ Bhat'n'Bhat ಉತ್ಪನ್ನಗಳನ್ನು ಖರೀದಿಸಿ...











Post a Comment

0 Comments