ದೆಹಲಿಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಿದ ಪಾಕ್, ಹೊಡೆದರುಳಿಸಿದ ಭಾರತ..!!

ಪಾಕಿಸ್ತಾನವು ಮತ್ತೆ ಮತ್ತೆ ಭಾರತದ ಮೇಲೆ ದಾಳಿ ನಡೆಸುತ್ತಲೇ ಇದ್ದು, ಇಂದೂ ಕೂಡ ಕ್ಷಿಪಣಿ ದಾಳಿ ನಡೆಸಿದೆ. ಸಾಕ್ಷಿ ನೀವು ಭಾರತದ ವಾಯುನೆಲೆ, ಆಸ್ಪತ್ರೆಗಳು, ಶಾಲೆಗಳು ಮತ್ತು ಧರ್ಮ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಾಯು ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿದೆ.
ಮೇ 10ನೇ ತಾರೀಕು ಅಂದರೆ ಇಂದು ಮುಂಜಾನೆ ಪಾಕಿಸ್ತಾನವು ದೆಹಲಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ಹರಿಯಾಣದ ಶಿರ್ಸಾ ಬಳಿ ಪಾಕಿಸ್ತಾನದ ಫತಾಹ್ 2 ಕ್ಷಿಪಣಿಯನ್ನು ಭಾರತ ತಡೆಹಿಡಿದಿದೆ. ಅಷ್ಟೇ ಅಲ್ಲದೆ ರಾತ್ರಿ ಸುಮಾರು  1.40 ಗಂಟೆಯ ಹೊತ್ತಿಗೆ ಭಾರತದ ವಾಯುನೆಲೆಗಳು, ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ಪಾಕ್ ನಿರಂತರ ದಾಳಿಯನ್ನು ನಡೆಸಿದೆ. ಭಾರತದ ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿವೆ.

ಪಾಕಿಸ್ತಾನದ ನಿರಂತರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಕೂಡ ದಾಳಿ ನಡೆಸಿದ್ದು, ಪಾಕಿಸ್ತಾನದ 6 ವಾಯುನೆಲೆಗಳ ಮೇಲೆ ದಾಳಿ ಮಾಡಿದೆ. ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿನ ನೂರ್ ಖಾನ್ ವಾಯುನೆಲೆ , ಚಕ್ಲಾಲಾ ನಗರದ ಮುರಿಯ್ ವಾಯುನೆಲೆ , ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫೀಕಿ ವಾಯುನೆಲೆ, ಮುರಿಯದ್ ವಾಯುನೆಲೆ , ಸುಕ್ಕೂರ್ ಮತ್ತು ಚುನಿಯನ್‌ ವಾಯುನೆಲೆ ಮೇಲೆ ದಾಳಿ ಮಾಡಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ , ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿ ನಡೆಸಿದ್ದು, ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರದಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿ ಮಾಡಿದೆ. ಭಾರತದ ಮೇಲೆ ಪದೇ ಪದೇ  ದಾಳಿ ಮಾಡುತ್ತಿರುವ ಪಾಕಿಸ್ತಾನವು ಯುದ್ಧಕ್ಕೆ ಪ್ರಚೋದಿಸುತ್ತಿದೆ. ನಾವು ಪಾಕಿಸ್ತಾನದ ಏರ್‌ ಬೇಸ್ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ಆದರೆ ಪಾಕ್ ನಮ್ಮ ಭಾರತೀಯ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.

Post a Comment

0 Comments