ಹಲವು ವರ್ಷಗಳಿಂದ ಅರೆಕಾಲಿಕವಾಗಿ ಜಾಡಮಾಲಿ ಕೆಲಸ ನಿರ್ವಹಿಸುತ್ತಿರುವ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಹಾಗೂ ಸಂಬಂಧಿಸಿದ ಸೇವಾ ಸೌಲಭ್ಯಗಳನ್ನು ಬಿಡುಗಡೆಗೊಳಿಸುವಂತೆ ಕೋರಿ ಕೋಲಾರ ಜಿಲ್ಲಾ ಪೊಲೀಸ್ ಮೀಸಲು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು ಹಾಗೂ ರಾಜ್ಯದ ವಿವಿಧ ಜಿಲ್ಲಾ ಶಶಸ್ತ್ರ ಮೀಸಲು ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 31 ಮಂದಿ ಸಿಬ್ಬಂದಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಅರ್ಜಿ ಪುಟಗಳಲ್ಲಿ ಮುದ್ರಿತವಾಗಿದ್ದ ಜಾಡಮಲಿ ಎಂಬ ಪದವನ್ನು ಗಮನಿಸಿದ ನ್ಯಾಯಪೀಠವು ಇದೊಂದು ಬೇಸರದ ಸಂಗತಿ ಎಂದು ಹೇಳಿದೆ. ನಗರ ಮತ್ತು ಪಟ್ಟಣಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡುವ ಈ ಸಿಬ್ಬಂದಿಗಳನ್ನು ಜಾಡ ಮಾಲಿ ಎಂಬ ಅಗೌರವ ಮತ್ತು ತುಚ್ಚ ಹೆಸರುಗಳಿಂದ ಕರೆಯಬಾರದು. ಇದರ ಬದಲಿಗೆ "ಸ್ವಚ್ಛತಾ ಸಹಾಯಕರು" ಎಂಬ ಗೌರವ ಸೂಚಕ ಪದನಾಮಗಳಿಂದ ಅವರನ್ನು ಕರೆಯಬೇಕು ಎಂದು ಆದೇಶ ನೀಡಿದೆ.
0 Comments