ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಭಾನು ಮುಷ್ತಾಕ್ ಅವರ "ಹಾರ್ಟ್ ಲ್ಯಾಂಪ್" ಪುಸ್ತಕ..!!

ಕರುನಾಡ ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಅವರು ಬರೆದ "ಹಾರ್ಟ್ ಲ್ಯಾಂಪ್" ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕವು ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. ಈ ಕೃತಿಯನ್ನು ದೀಪಾ ಬಸ್ತಿಯವರು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದು, ಪ್ರಶಸ್ತಿ ಸುತ್ತಿನಲ್ಲಿರುವ 6 ಪುಸ್ತಕಗಳ ಪೈಕಿ ಹಾರ್ಟ್ ಲ್ಯಾಂಪ್ ಕೃತಿ ಕೂಡ ಒಂದಾಗಿದೆ.
ಭಾನು ಮುಷ್ತಾಕ್ ಅವರು ಬರೆದಿರುವ ಒಟ್ಟು 12 ಕಥಾ ಸಂಕಲನಗಳನ್ನು ದೀಪಾ ಬಸ್ತಿ ಅವರು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ. ಆ ಕೃತಿಗಳು ಪೈಕಿ ಹಾರ್ಟ್ ಲ್ಯಾಂಪ್ ಕೃತಿ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಇದು ಬೂಕರ್ ಪ್ರಶಸ್ತಿ ಸಾಲಿನಲ್ಲಿರುವ ಬಗ್ಗೆ ವರದಿಯಾಗಿತ್ತು. ಈಗ ಬೂಕರ್ ಪ್ರತಿಷ್ಠಾನವು 6 ಪುಸ್ತಕಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕನ್ನಡದ ಕೃತಿಯೊಂದು ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಬೂಕರ್ ಪ್ರಶಸ್ತಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಇತರ ಕೃತಿಗಳೆಂದರೆ ಆನ್ ದಿ ಕ್ಯಾಲ್ಕುಲೇಶನ್ ಆಫ್ ವ್ಯಾಲ್ಯೂಮ್ (ಬುಕ್ 1), ಅಂಡರ್ ದಿ ಐ ಆಫ್ ದಿ ಬಿಗ್ ಬರ್ಡ್, ಪರ್ಫೆಕ್ಷನ್, ದಿ ಲಿಯೋಪಾರ್ಡ್ ಸ್ಕಿನ್ ಹ್ಯಾಟ್, ಸ್ಮಾಲ್ ಬೋಲ್ಟ್. ಈ ಪ್ರಶಸ್ತಿ ವಿಜೇತರ ಹೆಸರನ್ನು ಮೇ 20ರಂದು ಘೋಷಣೆ ಮಾಡಲಾಗುತ್ತದೆ ಎಂದು ಬೂಕರ್ ಪ್ರತಿಷ್ಠಾನವು ತಿಳಿಸಿದೆ.




Post a Comment

0 Comments