ಪ್ರವಾಸಿ ತಾಣವಾಗಲಿದೆ ಕರುನಾಡ ವಿಧಾನಸೌಧ: ಪ್ರವಾಸಿಗರಿಗೆ ಗೈಡೆಡ್ ಟೂರ್ ವ್ಯವಸ್ಥೆ!!

ಕರ್ನಾಟಕದ ಆಡಳಿತ ಕೇಂದ್ರವಾದ ವಿಧಾನಸೌಧವು ಇನ್ನು ಮುಂದೆ ಪ್ರವಾಸಿಗರ ಕೇಂದ್ರ ತಾಣವಾಗಲಿದೆ. ಪ್ರವಾಸೋದ್ಯಮ ಇಲಾಖೆಯು ಇಂತಹ ಅದ್ಭುತ ಪ್ರಸ್ತಾಪವನ್ನು ಇಟ್ಟಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿರುವ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದ ಒಳಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಿ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಿದೆ. 
ರಾಷ್ಟ್ರಪತಿ ಭವನ, ಸಂಸತ್ಕಳಿಕೆ ವೀಕ್ಷಣೆಗೆ ಇರುವಂತೆ ವಿಧಾನಸೌಧಕ್ಕೂ ಗೈಡೆಡ್ ಟೂರ್ ಏರ್ಪಡಿಸಲು ಸರ್ಕಾರವು ನಿರ್ಧರಿಸಿದೆ. ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ "ಗೈಡೆಡ್ ಟೂರ್" ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಂಸತ್ ಭವನ, ರಾಷ್ಟ್ರಪತಿ ಭವನದಲ್ಲಿ ಇದೇ ರೀತಿಯ ಗೈಡೆಡ್ ಟೂರ್ ವ್ಯವಸ್ಥೆ ಇದ್ದು, ಈ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಅದೇ ರೀತಿ ಗೈಡೆಡ್ ಟೂರ್ ವ್ಯವಸ್ಥೆಯನ್ನು ಮಾಡಿ ವಿಧಾನಸೌಧದ ಪಾರಂಪರಿಕತೆ, ಇತಿಹಾಸ, ಕಟ್ಟಡದ ಮಹತ್ವ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ವೀಕ್ಷಕರಿಗೆ ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದೆ.

ಇನ್ನು ಮುಂದೆ ವಿಧಾನಸೌಧದ ವೀಕ್ಷಣೆಗೆ ಯಾರಿಗೂ ಉಚಿತ ಪ್ರವೇಶವಿಲ್ಲ. ಇದರ ವೀಕ್ಷಣೆಗಾಗಿ ಬರುವಂತಹ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಈ ಗೈಡೆಡ್ ಟೂರ್ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆಯಿಂದ ಕೆಲ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಜಾರಿಗೊಳಿಸಲು ರಾಜ್ಯ ಸರ್ಕಾರವು ಆದೇಶ ನೀಡಿದೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ವಿಧಾನಸೌಧ ವೀಕ್ಷಣೆಗೆ ಸಂಬಂಧಿಸಿದಂತೆ ಶುಲ್ಕ ಮತ್ತು ದಿನಾಂಕ ನಿಗದಿ ಮಾಡಲಾಗುತ್ತದೆ.

ವಿಧಾನಸೌಧ ವೀಕ್ಷಣೆಗೆ ಬರುವಂತಹ ಪ್ರವಾಸಿಗರನ್ನು ಅಥವಾ ಸಾಧು ಜನರನ್ನು ಸಲ 30 ಜನರಿಗೆ ತಂಡಗಳನ್ನಾಗಿ ವಿಭಜಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಇದು ಊರಿಗೆ ಪ್ರತಿ ತಂಡಗಳ ಮೇಲ್ವಿಚಾರಣೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಿಸಲಾಗುತ್ತದೆ. ವೀಕ್ಷಣೆಗಾಗಿ ಆಗಮಿಸುವ ಪ್ರತಿ ಪ್ರವಾಸಿಗರ ಮೊಬೈಲ್ ಸಂಖ್ಯೆ ಮತ್ತು ವಿವರಗಳನ್ನು ವಿಧಾನಸೌಧದ ಭದ್ರತಾ ವಿಭಾಗಕ್ಕೆ ಆಯಾ ದಿನವೇ ಸಲ್ಲಿಸಲು ಸೂಚನೆ ನೀಡಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಆನ್ಲೈನ ಮೂಲಕವೂ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ವಿಧಾನಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಎಲ್ಲಿಗೆ ಆಗಮಿಸುವಂತಹ ಪ್ರವಾಸಿಗರ ಅಧಿಕೃತ ಗುರುತಿನ ಚೀಟಿ ಪರಿಶೀಲನೆಯ ನಂತರವೇ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. 

ಪ್ರವಾಸಿಗರ ಅನುಕೂಲಕ್ಕಾಗಿ ಸರಕಾರವು ವೈದ್ಯಕೀಯ ತಂಡದೊಂದಿಗೆ ಆಂಬುಲೆನ್ಸ್ ಸೌಲಭ್ಯವನ್ನು ಕಲ್ಪಿಸಲು ಆರೋಗ್ಯ ಇಲಾಖೆ ಕ್ರಮ ವಹಿಸಬೇಕು. ಹಾಗೆಯೇ ಪ್ರವಾಸಿಗರು ವಿಧಾನಸೌಧದ ಆವರಣದ ಸ್ವಚ್ಛತೆಯನ್ನು ಕಾಪಾಡಲು ಬದ್ಧರಾಗಿರಬೇಕು. ವಿಧಾನಸೌಧ ಕಟ್ಟಡದಲ್ಲಿ ವೀಕ್ಷಣೆಗೆ ಬರುವಂತಹ ಪ್ರವಾಸಿಗರು ಡ್ರೋನ್ ಕ್ಯಾಮರ ಬಳಸದಂತೆ ಸರಕಾರವು ನಿಷೇಧ ಹೇರಿದೆ. ಹಾಗೆಯೇ ಕುಡಿಯುವ ನೀರು ಹೊರತುಪಡಿಸಿ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ವಿಧಾನಸೌಧದ ಒಳಗಡೆ ತರುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. 




Post a Comment

0 Comments