ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ಸ್ಥಾನವನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ 600 ರಲ್ಲಿ 599 ಅಂಕಗಳನ್ನು ಗಳಿಸುವ ಮೊದಲ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನ ಬಾಯಿ 600 ಕ್ಕೆ 597 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಟ್ಟು 637,805 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 4,68,437 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಶೇಕಡ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ ಶೇಕಡ 53.29 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07, ವಿಜ್ಞಾನ ಥ 82.54 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶ ಉಡುಪಿ ಶೇಕಡಾ 93.90, ದಕ್ಷಿಣ ಕನ್ನಡ 93.57, ಬೆಂಗಳೂರು ದಕ್ಷಿಣ 85.36, ಕೊಡಗು 83.84, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ 82.93, ಶಿವಮೊಗ್ಗ 79.91, ಬೆಂಗಳೂರು ಗ್ರಾಮಾಂತರ 79.70, ಚಿಕ್ಕಮಗಳೂರು 79.56, ಹಾಸನ 77.56, ಚಿಕ್ಕಬಳ್ಳಾಪುರ 75.80, ಮೈಸೂರು 74.30, ಚಾಮರಾಜನಗರ 73.97, ಮಂಡ್ಯ 73.27, ಬಾಗಲಕೋಟೆ 72.83, ಕೋಲಾರ 72.45, ಧಾರವಾಡ 72.32, ತುಮಕೂರು 72.02, ರಾಮನಗರ 69.71, ದಾವಣಗೆರೆ 69.4, ಹಾವೇರಿ 76.56, ಬೀದರ್ 67.31, ಕೊಪ್ಪಳ 67.20, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 66.76, ಗದಗ 66.64, ಬೆಳಗಾವಿ 65.37, ಬಳ್ಳಾರಿ 64.41, ಚಿತ್ರದುರ್ಗ 59.87, ವಿಜಯಪುರ ಜಿಲ್ಲೆ 58.81, ರಾಯಚೂರು ಜಿಲ್ಲೆ 58.75ರಷ್ಟು ಫಲಿತಾಂಶ ಕಲಬುರಗಿ ಜಿಲ್ಲೆ 55.70, ಯಾದಗಿರಿ ಜಿಲ್ಲೆ 48.45ರಷ್ಟು ಫಲಿತಾಂಶ ದಾಖಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದು, ಆ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ. 3,45,694 ಬಾಲಕಿಯರು ಪರೀಕ್ಷೆ ಬರೆದಿದ್ದರು ಅದರಲ್ಲಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

0 Comments