ಏಪ್ರಿಲ್ 7 ರಂದು ವರದಿ ಪ್ರಕಟವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 288 ವಾಟರ್ ಬಾಟಲ್ ಮಾದರಿಗಳನ್ನು ಸಂಗ್ರಹಿಸಿದ್ದು, ಆ ಪೈಕಿ ಶೇಕಡಾ 50ರಷ್ಟು ನೀರು ಕಳಪೆ ಗುಣಮಟ್ಟದ್ದು ಎಂಬ ಸತ್ಯ ಬಯಲಾಗಿದೆ.
ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯ ಅತ್ಯಂತ ಬೇರೆ ಬೇರೆ ಕಂಪನಿಗಳ ಕುಡಿಯುವ ನೀರಿನ ಬಾಟಲ್ ಗಳು ಕಾಣ ಸಿಗುತ್ತಿವೆ. ಬೇಸಿಗೆಯ ದಿನಗಳಲ್ಲಿ ಬಾಯಾರಿಕೆಯಾಗಿ ಹೆಚ್ಚಿನ ಜನರು ಪ್ರಯಾಣದ ಸಮಯದಲ್ಲಿ ಈ ನೀರಿನ ಬಾಟಲ್ ಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಈ ಕಂಪನಿಗಳು ಮಾರಾಟ ಮಾಡುತ್ತಿರುವ ಹೆಚ್ಚಿನ ನೀರಿನ ಬಾಟಲ್ ಗಳಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ವಿಷಕಾರಿ ಅಂಶಗಳು ಪತ್ತೆಯಾಗಿದೆ. ಈ ಕಲುಷಿತ ನೀರು ಸೇವನೆಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ, ಭೇದಿ, ಜ್ವರ, ಸುಸ್ತು ಮೊದಲಾದ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ ಈ ನೀರನ್ನು ಸೇವಿಸುವ ಮಕ್ಕಳ ಆರೋಗ್ಯದಲ್ಲಿ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಆಹಾರ ಇಲಾಖೆಯ ಮೂಲಗಳು ಹೇಳಿದೆ.
ಈ ಆಘಾತಕಾರಿ ಪ್ರಯೋಗಾಲಯ ವರದಿ ಹೊರ ಬೀಳುತ್ತಿದ್ದಂತೆಯೇ ಕಳಪೆ ಗುಣಮಟ್ಟದ ನೀರು ಪೂರೈಕೆ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಎಲ್ಲೇ ಹೋದರೂ ಮಿನರಲ್ ವಾಟರ್ ಕುಡಿಯುವ ಮುನ್ನ ಜನರು ಅವುಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು. ಇಲ್ಲವಾದರೆ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟುಮಾಡುವ ಸಾಧ್ಯತೆ ಇದೆ.
0 Comments