ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಈಜಿಪ್ಟ್, ಇರಾಕ್, ಸೂಡಾನ್, ಜೋರ್ಡಾನ್, ಅಲ್ಜಿರಿಯಾ, ಇಥಿಯೋಪಿಯಾ, ಟುನೇಶಿಯಾ, ಯೆಮೆನ್ ಮತ್ತು ಮೊರೊಕ್ಕೊ ರಾಷ್ಟ್ರಗಳಿಗೆ ಸಧ್ಯದ ಮಟ್ಟಿಗೆ ವೀಸಾ ನೀಡಲಾಗುವುದಿಲ್ಲ ಎಂದು ಸೌದಿ ಅರೇಬಿಯಾ ಆಡಳಿತ ಮಂಡಳಿ ಹೇಳಿದೆ. ಇದರಿಂದಾಗಿ ಈ 14 ರಾಷ್ಟ್ರಗಳ ಜನರು ಉಮ್ರಕ್ಕಾಗಿ ಮೆಕ್ಕಾಗೆ ತೆರಳಲು ಅಸಾಧ್ಯವಾಗಿದೆ. ಪ್ರಸ್ತುತ ಉಮ್ರಾ ವೀಸಾ ಹೊಂದಿರುವವರು ಮಾತ್ರ ಏಪ್ರಿಲ್ 13ರೊಳಗೆ ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ ಎಂದು ಸೌದಿ ಆಡಳಿತ ಹೇಳಿದೆ.
ಮೇಲೆ ಹೇಳಿರುವ 14 ರಾಷ್ಟ್ರಗಳಿಂದ ಮೆಕ್ಕಾ ಯಾತ್ರೆಗೆ ತೆರಳುವ ಹೆಚ್ಚಿನ ಜನರು ಸರಿಯಾದ ನಿಯಮಗಳನ್ನು ಪಾಲಿಸಿ ಬರುವುದಿಲ್ಲ. ಮೆಕ್ಕಾಬೇಟಿಗೆ ನೋಂದಣಿ ಮಾಡಿಸದೆ, ಸೂಕ್ತ ಮಾರ್ಗದರ್ಶನ ಪಡೆಯದೆ ಬರುತ್ತಿದ್ದಾರೆ. ಈ ರೀತಿ ಮಾಹಿತಿ ಇಲ್ಲದೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳಿಗೆ ಸಮಸ್ಯೆ ಎದುರಾಗುತ್ತಿದೆ ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸೌದಿ ಆಡಳಿತ ತಿಳಿಸಿದೆ.
0 Comments