ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಡಿ ಪಾತ್ರಾ ಅವರು ಜನವರಿಯಲ್ಲಿ ನಿವೃತ್ತರಾಗಿದ್ದು, ಪ್ರಸ್ತುತ ಪೂನಂ ಗುಪ್ತ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ಅನುಮೋದನೆ ನೀಡಿದೆ. ಪೂನಂ ಅವರು ಪ್ರಧಾನಿಯವರ ಆರ್ಥಿಕ ಸಲಹಾ ತಮಂಡಳಿಯ ಸದಸ್ಯರಾಗಿದ್ದಾರೆ. ಜೊತೆಗೆ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸಂಚಾಲಕರೂ ಆಗಿದ್ದಾರೆ. ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್ ನಲ್ಲೂ ಸುಮಾರು ಎರಡು ದಶಕಗಳ ಕಾಲ ಹಿರಿಯ ಸ್ಥಾನಗಳಲ್ಲಿ ಕೆಲಸ ಮಾಡಿದ ನಂತರ 2021 ರಲ್ಲಿ ಎನ್.ಸಿ.ಎ.ಇ.ಆರ್ ಗೆ ಸೇರಿದ್ದರು.
ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಸ್ನಾತಕೋತ್ತರ ಪದವಿ ಪಡೆದಿರುವ ಪೂನಂ, ಅಮೆರಿಕದ ಮೇರಿ ಲ್ಯಾಂಡ್ ನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ 1998ರಲ್ಲಿ ಅವರು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಎಕ್ಸಿಮ್ ಬ್ಯಾಂಕ್ ಪ್ರಶಸ್ತಿ ಗಳಿಸಿದ್ದರು. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್(ಐಎಸ್ಐ) ನಲ್ಲಿ ಅಧ್ಯಾಪಕಿಯಾಗಿಯೂ ಕೆಲಸ ಮಾಡಿದ್ದಾರೆ.
ಆರ್ಥಿಕ ಬೆಳವಣಿಗೆ, ಅಂತರಾಷ್ಟ್ರೀಯ ಹಣಕಾಸು ಸ್ವರೂಪ, ಸೆಂಟ್ರಲ್ ಬ್ಯಾಂಕಿಂಗ್, ಸಮಗ್ರ ಅರ್ಥಶಾಸ್ತ್ರದ ಅಚಲತೆ, ಸಾರ್ವಜನಿಕ ಸಾಲ ಹಾಗೂ ರಾಜ್ಯಗಳ ಹಣಕಾಸು-ಈ ವಿಷಯಗಳ ಕುರಿತು ಪೂನಂ ಅವರು ಹೆಚ್ಚು ಪಾಂಡಿತ್ಯವನ್ನು ಹೊಂದಿದ್ದಾರೆ.
ಆರ್‌ಬಿಐ ರೆಪೋ ದರವನ್ನು ಇಳಿಸಿದರೂ ಅದನ್ನು ಸಾರ್ವಜನಿಕ ವಲಯದ ಇತರೆ ಬ್ಯಾಂಕುಗಳು ಗ್ರಾಹಕರಿಗೆ ಇನ್ನೂ ತಲುಪಿಸಿಲ್ಲ. ಇದರಿಂದ ಸಾರ್ವಜನಿಕರ ನಿತ್ಯದ ವ್ಯವಹಾರದಲ್ಲಿ ಹಣಕಾಸಿನ ಹರಿವು ಕಡಿಮೆಯಾಗುತ್ತಿದೆ. ಇಂತಹ ಸವಾಲುಗಳ ಕಡೆಗೆ ಪೂನಂ ಗುಪ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
0 Comments