ಗ್ರೂಪ್ ಸಿ ವೃಂದದ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ 177 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. 28 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಜೂನಿಯರ್ ಸ್ಟೆನೊಗ್ರಾಫರ್ 32 ಹುದ್ದೆಗಳು ಖಾಲಿ ಇದ್ದು, ಇವುಗಳಿಗೂ ಪಿಯುಸಿ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಗರಿಷ್ಠ ವಯಸ್ಸು 27 ವರ್ಷವಾಗಿರಬೇಕು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ದಿಲ್ಲಿ ಸಿಎಸ್ಐಆರ್ ಮತ್ತು ಸಿಎಸ್ಐಆರ್ ನ ವಿವಿಧ ಪ್ರಯೋಗಾಲಯ ಅಥವಾ ಪ್ರಧಾನ ಕಛೇರಿಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 500 ರೂ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆ, ಎಸ್.ಸಿ, ಎಸ್.ಟಿ, ವಿಶೇಷ ಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ.
ಕಂಪ್ಯೂಟರ್ ಆಧರಿತ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. 200 ಅಂಕಗಳ ಪ್ರಶ್ನೆಗಳಿದ್ದು ಬರೆಯಲು 2:00 ಸಮಯ ನೀಡಲಾಗುತ್ತದೆ. ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ ಹಾಗೂ ಜನರಲ್ ಅವರ್ನೆಸ್ ಸಂಬಂಧಿಸಿದಂತೆ ತಲಾ 50 ಅಂಕಗಳು ಹಾಗೂ ಇಂಗ್ಲಿಷ್ ಲ್ಯಾಂಗ್ವೇಜ್ ಮತ್ತು ಕಾಂಪ್ರಹೆನ್ಶನ್ ಸಂಬಂಧಿಸಿದ್ದ 100 ಅಂಕಗಳ ಪ್ರಶ್ನೆಗಳಿರುತ್ತವೆ. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪ್ರಶ್ನೆಗಳಿರುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21.04.2025
ಕಂಪ್ಯೂಟರ್ ಆಚರಿತ ಪರೀಕ್ಷೆ: ಮೇ ಅಥವಾ ಜೂನ್ ತಿಂಗಳಲ್ಲಿ.
ಪರೀಕ್ಷಾ ಕೇಂದ್ರಗಳ ವಿವರ ಪ್ರವೇಶ ಪತ್ರಗಳಲ್ಲಿ ತಿಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ https//crridom.gov.in ಸಂಪರ್ಕಿಸಬಹುದು.
0 Comments