ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ವೇದಮೂರ್ತಿ ವಿ.ಎಸ್ ಭಟ್ ಅವರು ಗೊನೆ ಮುಹೂರ್ತ ನೆರವೇರಿಸಿದರು. ದೇವಾಲಯದ ಇನ್ನೋರ್ವ ಪ್ರಧಾನ ಅರ್ಚಕ ವಸಂತ ಕೇದಿಲಾಯ ಈ ಸಂದರ್ಭದಲ್ಲಿ ಸಹಕರಿಸಿದರು.
ಗೊನೆ ಮುಹೂರ್ತದ ಈ ಶುಭ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೇವಳದ ಸಮಿತಿ ಪದಾಧಿಕಾರಿಗಳು, ಕರ ಸೇವಕರು, ಭಕ್ತಾದಿಗಳು ಉಪಸ್ಥಿತರಿದ್ದರು.
0 Comments