ಅಂತರಾಷ್ಟ್ರೀಯ ಯೋಗ ದಿನ: ಘೋಷ ವಾಕ್ಯ ಪ್ರಕಟ!!

ಯೋಗ ಎಂಬುದು ಮನುಷ್ಯನ ಆರೋಗ್ಯಕ್ಕೆ ಅತ್ಯಮೂಲ್ಯ ಔಷಧಿ. ಪ್ರತಿನಿತ್ಯ ಯೋಗ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಶರೀರವನ್ನು ಸಮತೋಲನದಲ್ಲಿಡಲು ಸಹಾಯವಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಡೀ ಜಗತ್ತಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದ್ದಾರೆ. ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವು "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ"ಎಂಬುದಾಗಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂತರಾಷ್ಟ್ರೀಯ ಯೋಗ ದಿನವೂ ಒಂದು ಭವ್ಯ ಉತ್ಸವದ ಆಕಾರವನ್ನು ಪಡೆದುಕೊಂಡಿದೆ. ನಾವು ಯೋಗದ ಮೂಲಕ ಇಡೀ ಜಗತ್ತನ್ನು ಆರೋಗ್ಯಕರವಾಗಿ ಇರಿಸಲು ಬಯಸುತ್ತೇವೆ. ಫಿಟ್ನೆಸ್ ಜೊತೆಗೆ ಯೋಗ ಕೂಡ ಅಭ್ಯಾಸವಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ಅಂತರಾಷ್ಟ್ರೀಯ ಯೋಗ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ನೂರು ದಿನಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ನೀವು ಇನ್ನೂ ನಿಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಿಲ್ಲದಿದ್ದರೆ ಈಗಲೇ ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಪ್ರತೀ ವರ್ಷ ಜೂನ್ 21ರಂದು ಯೋಗ ದಿನ ಆಚರಿಸಲಾಗುತ್ತಿದ್ದು ಇದು ಐದನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಗಲಿದೆ.

Post a Comment

0 Comments