ನಿಮ್ಹಾನ್ಸ್ ಅಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ!!

ಬೆಂಗಳೂರಿನ ನಿಮ್ಹಾನ್ಸ್ ಅಲ್ಲಿ ಒಂದು ವರ್ಷದ ಅವಧಿಗೆ ಪ್ರಾಜೆಕ್ಟ್ ಅಸೋಸಿಯೇಟ್ಸ್ ಹುದ್ದೆ ಭರ್ತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕ್ಲಿನಿಕಲ್ ಸೈಕಾಲಜಿ/ನ್ಯೂರೋ ಸೈಕಾಲಜಿ/ಸೈಕ್ಯಾಟ್ರಿ ಸೋಶಿಯಲ್ ವರ್ಕ್/ಕಂಗೆಟಿವ್ ಸೈನ್ಸ್ ನಲ್ಲಿ ಸ್ನಾತಕ ಪದವಿ ಪೂರೈಸಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 40 ವರ್ಷದೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳ ವೇತನ ಶ್ರೇಣಿಯು ನೆಟ್ ಆದವರಿಗೆ 31 ಸಾವಿರ ರೂಪಾಯಿ ಇದ್ದು ಇತರ ಅಭ್ಯರ್ಥಿಗಳಿಗೆ 25 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದಂತೆ ಎಪ್ರಿಲ್ 7 ತಾರೀಕಿನೊಳಗೆ vkkg24@gmail.com ಮೇಲ್ ಗೆ ಅರ್ಜಿ ಕಳುಹಿಸಬೇಕು. ಮೊಬೈಲ್ ಸಂಖ್ಯೆ, ಇ-ಮೇಲ್, ಅಂಚೆ ವಿಳಾಸವನ್ನು ನಮೂದಿಸಿರಬೇಕು. ಅಧಿಸೂಚನೆಗಾಗಿ https://bit.ly/3Y58qKb ಎನ್ನು ಪರಿಶೀಲಿಸಬಹುದು.

Post a Comment

0 Comments