ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಡಿವಾಳ ಸಮುದಾಯದವರು ಸೇರಿ ಹಿಂದುಳಿದ ವರ್ಗದ ಎಲ್ಲಾ ಮಕ್ಕಳು ನಗರ ಪ್ರದೇಶಗಳಲ್ಲಿ ಅಥವಾ ಬೇರೆ ಊರುಗಳಿಗೆ ತೆರಳಿ ವಿದ್ಯಾಭ್ಯಾಸ ಪಡೆಯುವ ಸಂದರ್ಭದಲ್ಲಿ ವಸತಿಗಾಗಿ ಸ್ವಂತ ಖರ್ಚುಗಳನ್ನು ಬಳಸಿಕೊಂಡು ಖಾಸಗಿ ವಿದ್ಯಾರ್ಥಿ ನಿಲಯಗಳಲ್ಲಿ ಅಥವಾ ಪೀಜಿಗಳಲ್ಲಿ ನಿಂತು ಓದು ಮುಂದುವರಿಸುವುದು ತುಂಬಾನೆ ಕಷ್ಟಕರ ಹಾಗೂ ದುಬಾರಿ. ಆದ್ದರಿಂದ ಸರಕಾರಿ ಹಾಸ್ಟೆಲ್ ಪ್ರವೇಶ ಸಿಗದ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆಯನ್ನು ಆರಂಭಿಸಿ ಮಾಸಿಕ ಸಾವಿರದ ಐದುನೂರು ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರಸ್ತುತ ಈ ಹಣ ಸಾಕಾಗದ ಹಿನ್ನೆಲೆಯಲ್ಲಿ ಅದನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು. ಇದರಿಂದಾಗಿ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 20,000 ವಿದ್ಯಾರ್ಥಿ ವೇತನ ಹಣ ಸಿಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
0 Comments