ಯುನೆಸ್ಕೋ ಈ ಘೋಷಣೆಯನ್ನು ಮಾಡುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರದ ಸೇರ್ಪಡೆಯನ್ನು 'ನಮ್ಮ ಅಸಾಧಾರಣ ಜ್ಞಾನ ಹಾಗೂ ಶ್ರೀಮಂತ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆ' ಎಂದು ಹೆಮ್ಮೆಯಿಂದ ಬರೆದಿದ್ದಾರೆ. ಅಷ್ಟೇ ಅಲ್ಲದೆ ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದ್ದು, ಹಿಂದೂ ಧರ್ಮ ಗ್ರಂಥಗಳು ಶತಶತಮಾನಗಳಿಂದ ನಾಗರಿಕತೆ ಮತ್ತು ಪ್ರಜ್ಞೆಯನ್ನು ಪೋಷಿಸಿದೆ ಎಂದು ಹೇಳಿದ್ದಾರೆ.
ಭಗವದ್ಗೀತೆಯು ಹಿಂದೂ ಧರ್ಮದ ಧಾರ್ಮಿಕ ಗ್ರಂಥವಾಗಿದ್ದು ಶ್ರೀಕೃಷ್ಣನು ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಬೋಧಿಸಿದ ಗೀತೆಯ ಮಹಾಸಾರ ಇದಾಗಿದೆ. ಭಗವದ್ಗೀತೆಯು 18 ಅಧ್ಯಾಯಗಳಲ್ಲಿ ರೂ.700 ಶ್ಲೋಕಗಳನ್ನು ಒಳಗೊಂಡಿದ್ದು, ಮಹಾಭಾರತದಲ್ಲಿ ಬರುವ ಈ ಅಧ್ಯಾಯವು ಹಿಂದು ಧರ್ಮದ ಪವಿತ್ರ ಧರ್ಮ ಗ್ರಂಥವಾಗಿದೆ. ಭಗವದ್ಗೀತೆಯ 18 ಅಧ್ಯಾಯದುದ್ದಕ್ಕೂ ಕರ್ತವ್ಯ, ಜ್ಞಾನ ಮತ್ತು ಭಕ್ತಿಯ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುತ್ತದೆ.
ಹಾಗೆಯೇ ಭರತ ಮುನಿಗಳು ಬರೆದಂತಹ ನಾಟ್ಯ ಶಾಸ್ತ್ರವು ಪ್ರದರ್ಶನ ಕಲೆಗಳನ್ನು ವಿವರಿಸಿಸುವ ಸಂಸ್ಕೃತ ಕಾವ್ಯಾತ್ಮಕ ಶ್ಲೋಕ ಸಂಗ್ರಹವಾಗಿದೆ. ಇದು ನಾಟ್ಯ, ಅಭಿನಯ, ರಸ, ಭಾವ, ಸಂಗೀತಗಳನ್ನು ವ್ಯಾಖ್ಯಾನಿಸುವ ಸಮಗ್ರ ನಿಯಮಗಳನ್ನು ಒಳಗೊಂಡಿದೆ. ಇದು ಕಲೆಗಳ ಬಗ್ಗೆ ಪ್ರಾಚೀನ ವಿಶ್ವಕೋಶವಾಗಿದ್ದು, ಭಾರತೀಯ ರಂಗಭೂಮಿ, ಕಾವ್ಯ ಶಾಸ್ತ್ರ, ಸೌಂದರ್ಯ ಶಾಸ್ತ್ರ, ನೃತ್ಯ ಮತ್ತು ಸಂಗೀತವನ್ನು ಪ್ರೇರೇಪಿಸುವಂತಹ ಅದ್ಭುತ ಗ್ರಂಥವಾಗಿದೆ.
ವಿಶ್ವಾದ್ಯಂತ ಇರುವ ಪ್ರಾಚೀನ ಶ್ರೇಷ್ಠ ಸಾಕ್ಷ ಚಿತ್ರ ಪರಂಪರೆಯನ್ನು ರಕ್ಷಿಸಲು ಇರುವ ಒಂದು ಅತ್ಯದ್ಭುತ ಯೋಜನೆಯೇ ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್. 1992 ರಲ್ಲಿ ಇದನ್ನು ಪ್ರಾರಂಭಿಸಲಾಗಿದ್ದು ಜಗತ್ತಿನಾದ್ಯಂತ ಇರುವ ಅಮೂಲ್ಯವಾದ ಐತಿಹಾಸಿಕ ದಾಖಲೆಗಳು ಮತ್ತು ಗ್ರಂಥಾಲಯಗಳನ್ನು ಇದು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ವಿಶ್ವದ ಸಾಂಸ್ಕೃತಿಕ ಪರಂಪರೆಯನ್ನು ವಿಶೇಷವಾಗಿ ಸಂಘರ್ಷ ಅಥವಾ ನೈಸರ್ಗಿಕ ವಿಪತ್ತಿನಿಂದ ರಕ್ಷಿಸುತ್ತದೆ.
ಮೆಮೊರಿ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ ಗೆ ಯಾವುದೇ ಒಂದು ಸಾಕ್ಷಿ ಚಿತ್ರದ ಆಯ್ಕೆಯಾಗಬೇಕಾದರೆ ಮಹಾನಿರ್ದೇಶಕರ ನೇತೃತ್ವದ 14 ಸದಸ್ಯರ ಅಂತರಾಷ್ಟ್ರೀಯ ಸಲಹಾ ಸಮಿತಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಇದಕ್ಕೆ ಸಾಕ್ಷಾ ಚಿತ್ರಗಳು ಅಥವಾ ಅಮೂಲ್ಯ ದಾಖಲೆಗಳ ಪರಂಪರೆಯನ್ನು ಸೇರ್ಪಡೆ ಮಾಡುತ್ತದೆ. ಈ ವರ್ಷ ಯುನೆಸ್ಕೊ ತನ್ನ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್ ನಲ್ಲಿ ಒಟ್ಟು 74 ಹೊಸ ನಮೂದುಗಳನ್ನು ಮಾಡಲಾಗಿದ್ದು, ಒಟ್ಟು 570 ಸಂಗ್ರಹಗಳು ಆಗಿವೆ.
ಈ ರಿಜಿಸ್ಟರ್ ನಲ್ಲಿ ಭಾರತದ ಒಟ್ಟು 14 ಸಾಕ್ಷ ಚಿತ್ರಗಳು ಸೇರ್ಪಡೆಯಾಗಿದ್ದು ಋಗ್ವೇದ ಹಸ್ತ ಪ್ರತಿಗಳು, ಗಿಲ್ಗಿಟ್ ಹಸ್ತ ಪ್ರತಿಗಳು, ಐಎಎಸ್ ತಮಿಳು ವೈದ್ಯಕೀಯ ಹಸ್ತ ಪ್ರತಿ ಸಂಗ್ರಹ, ಮೊಘಲ್ ಸಾಮ್ರಾಜ್ಯದ ದಾಖಲೆಗಳು, ರಾಮಚರಿತ ಮಾನಸದ ಹಸ್ತ ಪ್ರತಿಗಳೊಂದಿಗೆ ಈಗ ನಾಟ್ಯ ಶಾಸ್ತ್ರ ಹಾಗೂ ಭಗವದ್ಗೀತೆಯು ಸೇರ್ಪಡೆಗೊಂಡಿರುವುದು ಭಾರತೀಯ ಪರಂಪರೆಗೆ ಸಂದ ಬಹುದೊಡ್ಡ ಹೆಮ್ಮೆ ಹಾಗೂ ಗೌರವ ಇದಾಗಿದೆ.
0 Comments