ಸುಮಾರು 272 ಕಿಲೋಮೀಟರ್ ಉದ್ದದ ಈ ಯು ಎಸ್ ಬಿ ಆರ್ ಎಲ್ ಯೋಜನೆಯಲ್ಲಿ 119 ಕಿಲೋಮೀಟರ್ ಉದ್ದದ ಸುರಂಗ ವ್ಯವಸ್ಥೆ ಇದೆ. ಕಾಶ್ಮೀರಕ್ಕೆ ರೈಲು ಸಂಚಾರ ವ್ಯವಸ್ಥೆ ಪ್ರತಿಯೊಬ್ಬ ಭಾರತೀಯನ ಕನಸ್ಸು ಆಗಿತ್ತು. ಇದೀಗ ಯು ಎಸ್ ಬಿ ಆರ್ ಎಲ್ ವಿಭಾಗ ಸಿದ್ದವಾಗಿದೆ. ಈ ಸಂಪೂರ್ಣ ಪ್ರದೇಶ ಕಾಶ್ಮೀರದ ಧಾರ್ಮಿಕ, ಪ್ರವಾಸೋದ್ಯಮ, ಸಂಪರ್ಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಸೇತುವೆ ನಿರ್ಮಾಣದಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿದ್ದು ಉದ್ಘಾಟನೆಯ ನಂತರವೂ ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ.
ಉದ್ಘಾಟನಾ ದಿನದಂದು ಭಾರತೀಯ ರೈಲ್ವೆ ಎರಡು ಒಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಒಂದು ಶ್ರೀನಗರದಿಂದ ಮತ್ತು ಇನ್ನೊಂದು ಕತ್ರದಿಂದ ಶ್ರೀನಗರಕ್ಕೆ ಸಂಚರಿಸಲಿದೆ. ಈ ವರ್ಷದ ಆರಂಭದಲ್ಲಿ ಭಾರತೀಯ ರೈಲ್ವೆ ಶ್ರೀ ಮಾತಾ ವೈಷ್ಣೋದೇವಿ ಕತ್ರದಿಂದ ಶ್ರೀ ನಗರದವರೆಗೆ ಪ್ರಾಯೋಕಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ಮಾರ್ಗ ಅಂಜಿಖಾದ್ ಸೇತುವೆ, ಭಾರತದ ಮೊದಲ ಕೇಬಲ್ ಸ್ಟೇಡ್ ರೈಲ್ವೆ ಸೇತುವೆ ಮತ್ತು ಚೆನಾಬ್ ಸೇತುವೆಯಂತಹ ಇಂಜಿನಿಯರಿಂಗ್ ಅದ್ಭುತಗಳನ್ನು ಹಾದು ಹೋಗುತ್ತದೆ.
0 Comments