ನ್ಯಾಯ ವಿತರಣೆಯಲ್ಲಿ ಕರ್ನಾಟಕಕ್ಕೆ ನಂ.1 ಸ್ಥಾನ..!!

ಭಾರತದಲ್ಲಿನ ಪೊಲೀಸ್, ಕಾರಾಗೃಹ ಹಾಗೂ ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮೇಲುಗೈ ಸಾಧಿಸಿದ್ದು, ಅದರಲ್ಲೂ ಮೊದಲ ಸ್ಥಾನವನ್ನು ಕರ್ನಾಟಕ ಅಲಂಕರಿಸಿಕೊಂಡಿದೆ.
"ದಿ ಇಂಡಿಯಾ ಜಸ್ಟೀಸ್ ರಿಪೋರ್ಟ್" 2025ರ ವರದಿ ಪ್ರಕಾರ, ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶದ 18 ರಾಜ್ಯಗಳ ಪೈಕಿ ನ್ಯಾಯಾಂಗದ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕವು ಮೊದಲ ಸ್ಥಾನ ಪಡೆದುಕೊಂಡಿದೆ. ಪೋಲಿಸ್ ಇಲಾಖೆಯಲ್ಲಿ ಆಫೀಸರ್ ಹಂತದಿಂದ ಹಿಡಿದು ಕಾನ್ಸ್ಟೇಬಲ್ ವರೆಗೂ ಎಸ್ಸಿ, ಎಸ್ ಟಿ ಹಾಗೂ ಓಬಿಸಿ ಮೀಸಲು ಜಾರಿಗೆ ತಂದಿದ್ದು ಕೂಡ ಕರ್ನಾಟಕ ಮಾತ್ರವೇ ಎಂದು ವರದಿ ಹೇಳಿದೆ. 

ಈ ಮೂಲಕ ಹತ್ತರಲ್ಲಿ 6.78ರಷ್ಟು ಅಂಕಗಳನ್ನು "ದಿ ಇಂಡಿಯಾ ಜಸ್ಟೀಸ್ ರಿಪೋರ್ಟ್" ಕರ್ನಾಟಕಕ್ಕೆ ಕೊಟ್ಟಿದೆ. ಇನ್ನು ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶಕ್ಕೆ 6.32, ತೆಲಂಗಾಣಕ್ಕೆ 6.15, ಕೇರಳಕ್ಕೆ 6.09 ಹಾಗೂ ತಮಿಳುನಾಡಿಗೆ 5.62 ಅಂಕಗಳನ್ನು ನೀಡಲಾಗಿದೆ.

Post a Comment

0 Comments