ಭಾರತದ ಸ್ವಚ್ಛ ನಗರ ಪಟ್ಟಿ ಪ್ರಕಟ: ಇಂದೋರ್ ನಂ.1 ಸ್ಥಾನ, ಟಾಪ್ 10ರಲ್ಲಿ ಮೈಸೂರು!!

ಭಾರತದ ಸ್ವಚ್ಛ ಸರ್ವೇಕ್ಷಣಾ 2025ರ ಪಟ್ಟಿ ಪ್ರಕಟಗೊಂಡಿದ್ದು, ಭಾರತದಲ್ಲಿ ಸ್ವಚ್ಛವಾಗಿರುವ ಮತ್ತು ಸ್ವಚ್ಛತೆಯನ್ನು ನಿರ್ವಹಣೆ ಮಾಡಿರುವ ನಗರಗಳ ಪಟ್ಟಿಯಲ್ಲಿ ಇಂದೋರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಮೊದಲ 10 ಸ್ಥಾನಗಳಲ್ಲಿ ಕರ್ನಾಟಕದ ಏಕೈಕ ನಗರವು ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. 
ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದು ಇದರಿಂದಾಗಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡತೊಡಗಿದೆ. ಆದರೂ ಜನರು ಸ್ವಚ್ಛತೆಯ ಕಡೆಗೆ ಗಮನ ಕೊಡದಿರುವುದು ಬೇಸರದ ವಿಷಯವೂ ಆಗಿದೆ. ಹೆಚ್ಚಿನ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡರು ಜನರು ಅದನ್ನು ಪಾಲಿಸದೇ ಇರುವುದು ಕಂಡು ಬರುತ್ತಿದೆ. ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ನಂತರ ಪ್ರತಿ ವರ್ಷ ಭಾರತದ ಸ್ವಚ್ಛ ನಗರ ಯಾವುದು ಎಂದು ಸಮೀಕ್ಷೆ ನಡೆಸಿ ವರದಿಯನ್ನು ಪ್ರಕಟಿಸಲಾಗುತ್ತದೆ. ಈ ಸ್ವಚ್ಛ ಸರ್ವೇಕ್ಷಣ ಪಟ್ಟಿಯಲ್ಲಿ ಭಾರತದ ಅತ್ಯಂತ ಸ್ವಚ್ಛ ನಗರವಾಗಿರುವ ಮಧ್ಯ ಪ್ರದೇಶದ ಇಂದೋರ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2017ನೇ ಸಾಲಿನಿಂದ ಇಂದೋರ್ ಸತತವಾಗಿ ಸ್ವಚ್ಛತೆಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಗುಜರಾತ್ ನ ಸೂರತ್ ನಗರವು ಸ್ವಚ್ಛತೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನವ ಮುಂಬೈ ಮೂರನೇ ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷ.


ಭಾರತದ ಸ್ವಚ್ಛ ಸರ್ವೇಕ್ಷಣ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಕರ್ನಾಟಕದ ಏಕೈಕ ನಗರ ಸ್ಥಾನ ಪಡೆದುಕೊಂಡಿದ್ದು, ಆ ಹೆಗ್ಗಳಿಕೆಗೆ ಅರಮನೆ ನಗರಿ ಮೈಸೂರು ಪಾತ್ರವಾಗಿದೆ. ಮೈಸೂರು ಈ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯದ್ಭುತ ಪ್ರವಾಸಿ ತಾಣವಾಗಿರುವ ಮೈಸೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರೂ ಸ್ವಚ್ಛತೆಯನ್ನು ಸದಾ ಕಾಪಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಭಾರತದ 10 ಸ್ವಚ್ಚ ನಗರ
1) ಇಂದೋರ್, ಮಧ್ಯಪ್ರದೇಶ
2) ಸೂರತ್, ಗುಜರಾತ್
3) ನವಿ ಮುಂಬೈ, ಮಹಾರಾಷ್ಟ್ರ
4) ವಿಶಾಖಪಟ್ಟಣಂ, ಆಂಧ್ರ ಪ್ರದೇಶ
5) ವಿಜಯವಾಡ, ಆಂಧ್ರ ಪ್ರದೇಶ
6) ಭೋಪಾಲ್, ಮಧ್ಯಪ್ರದೇಶ
7) ತಿರುಪತಿ, ಆಂಧ್ರ ಪ್ರದೇಶ
8) ಮೈಸೂರು, ಕರ್ನಾಟಕ
9) ನವ ದೆಹಲಿ, ದೆಹಲಿ
10) ಅಂಬಿಕಾಪುರ, ಚತ್ತೀಸಘಡ



Post a Comment

0 Comments