ಆರ್.ಬಿ.ಐ ಮುಡಿಗೆ ಡಿಜಿಟಲ್ ಟ್ರಾನ್ಸ್ಫಾರ್ಮೆಶನ್ ಅವಾರ್ಡ್

ಲಂಡನ್ ನ ಸೆಂಟ್ರಲ್ ಬ್ಯಾಂಕಿಂಗ್ ಕೊಡಮಾಡುವ ಡಿಜಿಟಲ್ ಟ್ರಾನ್ಸ್ಫಾರ್ಮೆಶನ್ ಅವಾರ್ಡ್-2025ಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಭಾಜನವಾಗಿದೆ ಯಾಂಕಿಂಗ್ ವ್ಯವಹಾರದಲ್ಲಿ ಡಿಜಿಟಲ್ ಅಳವಡಿಸಿಕೊಳ್ಳುವ ಸಲುವಾಗಿ ಸಾರಥಿ ಮತ್ತು ಪ್ರವಾಹ ಎಂಬ ಎರಡು ಉಪಕ್ರಮಗಳನ್ನು ಆರ್‌ಬಿಐ ಜಾರಿಗೊಳಿಸಿತ್ತು ಈ ಎರಡು ಉಪಕ್ರಮಗಳ ಸಮರ್ಪಕ ಜಾರಿಯಿಂದಾಗಿ ಆರ್‌ಬಿಐಗೆ ಈ ಗೌರವ ಸಂದಿದೆ. 
2023ರ ಜನವರಿ ತಿಂಗಳಲ್ಲಿ ಆರ್‌ಬಿಐ ಸಾರಥಿ ಎಂಬ ಯೋಜನೆಯನ್ನು ಪರಿಚಯಿಸಿತ್ತು. ಇದರ ಅಡಿಯಲ್ಲಿ ಆರ್‌ಬಿಐನ 40 ಕ್ಕೂ ಹೆಚ್ಚು ಘಟಕಗಳಲ್ಲಿ ಕಾರ್ಯನಿರ್ವಹಿಸುವ 13,500ಕ್ಕೂ ಅಧಿಕ ಉದ್ಯೋಗಿಗಳು ನಿರ್ವಹಿಸುವ ದಾಖಲೆಗಳನ್ನು ಒಗ್ಗೂಡಿಸಿ ಡಿಜಿಟಲೀಕರಣಗೊಳಿಸಲಾಯಿತು.

ಸಾರಥಿ ಯಶಸ್ವಿಯಾದ ಬಳಿಕ 70ಕ್ಕೂ ಅಧಿಕ ನಿಯಂತ್ರಕ ಅಪ್ಲಿಕೇಶನ್ ಗಳ ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು 2024ರ ಮೇ ತಿಂಗಳಲ್ಲಿ ಪ್ರವಾಹ ಉಪಕ್ರಮವನ್ನು ಜಾರಿಗೆ ತರಲಾಯಿತು. ಈ ಎರಡು ಉಪಕ್ರಮಗಳು ಗ್ರಾಹಕ ಸ್ನೇಹಿಗಳಾಗಿದ್ದು, ಅನಗತ್ಯ ವಿಳಂಬಗಳನ್ನು ಕಡಿಮೆ ಮಾಡಲಿದೆ. ಈ ಯೋಜನೆಗಳನ್ನು ಆರ್‌ಬಿಐನ ಐಟಿ ವಿಭಾಗದ ಮುಖ್ಯಸ್ಥ ಶೈಲೇಂದ್ರ ತ್ರಿವೇದಿ ಅವರು ವಹಿಸಿಕೊಂಡಿದ್ದರು.

ಭಾರತೀಯ ರಿಸರ್ವ್ ಬ್ಯಾಂಕಿನ ಈ ಡಿಜಿಟಲೀಕರಣದ ಕಾರ್ಯ ವೈಖರಿಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ಟ್ರಾನ್ಸ್ಫಾರ್ಮೆಶನ್ ಅವಾರ್ಡ್ ಅನ್ನು ಘೋಷಣೆ ಮಾಡಿದ್ದಾರೆ.

Post a Comment

0 Comments