ನಕಲಿ ಪಾಸ್ಪೋರ್ಟ್ ಬಳಸಿದರೆ ಏಳು ವರ್ಷ ಜೈಲು ಶಿಕ್ಷೆ..!!

ದಿನೇ ದಿನೇ ನಕಲಿ ಪಾಸ್ಪೋರ್ಟ್ ಬಳಸಿ ದೇಶ-ವಿದೇಶಗಳಿಗೆ ಸಂಚರಿಸುವುದು ಮಾತ್ರವಲ್ಲದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತದೊಳಗೆ ಬರಲು, ದೇಶದಿಂದ ಹೊರ ಹೋಗಲು ಮತ್ತು ಭಾರತದಲ್ಲಿ ನೆಲೆಸಲು ನಕಲಿ ಪಾಸ್ ಪೋರ್ಟ್ ಮತ್ತು ವೀಸಾ ಬಳಸಿದವರಿಗೆ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲಾಗುತ್ತದೆ.
ಭಾರತದಲ್ಲಿ ಅಸ್ತಿತ್ವದಲ್ಲಿರುವ ವಿದೇಶಿಗರು ಮತ್ತು ವಲಸಿಗರಿಗೆ ಸಂಬಂಧ ಪಟ್ಟ ಹಲವು ಕಾಯ್ದೆಗಳನ್ನು ಒಗ್ಗೂಡಿಸಿ ವಲಸೆ ಮತ್ತು ವಿದೇಶಿಯರ ಮಸೂದೆ 2025ನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದೆ. ಈ ಮಸೂದೆಗೆ ಉಭಯ ಸದನಗಳಲ್ಲಿ ಅನುಮೋದನೆಯೂ ಸಿಕ್ಕಿದೆ. ಈ ಹೊಸ ಮಸೂದೆಯ ಅನ್ವಯ ಹೋಟೆಲ್ಗಳು, ವಿಶ್ವವಿದ್ಯಾಲಯಗಳು ಮತ್ತು ಇತರ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಮ್ ಗಳು ತಮ್ಮಲ್ಲಿ ನೆಲೆಸಿರುವ ವಿದೇಶಿಗರ ಸಂಪೂರ್ಣ ಮಾಹಿತಿಯನ್ನು ಗೃಹ ಸಚಿವಾಲಯಕ್ಕೆ ಒದಗಿಸುವುದು ಕಡ್ಡಾಯವಾಗಿದೆ. ಈ ಮೂಲಕ ಭಾರತದಲ್ಲಿ ವಾಸಿಸುತ್ತಿರುವ ವಿದೇಶಿಯರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ.

ವಿದೇಶಿಯರು ಆಗಾಗ ಹಾರತಕ್ಕೆ ಭೇಟಿ ನೀಡುವ ಸ್ಥಳಗಳ ಮೇಲೆ ನಿಯಂತ್ರಣ ಮತ್ತು ನಿರ್ದಿಷ್ಟ ವರ್ಗದ ವಿದೇಶಿಯರಿಗೆ ಮಾತ್ರ ಪ್ರವೇಶವನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಈ ಮಸೂದೆ ಅಧಿಕಾರವನ್ನು ನೀಡುತ್ತದೆ. ಆದ್ದರಿಂದ ನಕಲಿ ಪಾಸ್ಪೋರ್ಟ್ ವೀಸಾ ಅಥವಾ ವೀಸಾ ಅವಧಿ ಮುಗಿದರೂ ಭಾರತದಲ್ಲಿ ನೆಲೆ ಇರುವ ವಿದೇಶಿಗರು ಅಥವಾ ವಲಸಿಗರಿಗೆ ದಂಡ ಮತ್ತು ಜೈಲುವಾಸ ಕಟ್ಟಿಟ್ಟ ಬುತ್ತಿ.

Post a Comment

0 Comments