ಬೇಸಿಗೆ ಪಜೀತಿ; ವಕೀಲರಿಗೆ ಕಪ್ಪು ಕೋಟ್ ನಿಂದ ವಿನಾಯಿತಿ..!

ಬೇಸಿಗೆ ಬಿಸಿ ತಾರಕಕ್ಕೇರುತ್ತಿದ್ದು ಕಪ್ಪು ಬಟ್ಟೆ ಧರಿಸುವುದು ತೀರಾ ಕಷ್ಟಕರವಾಗುತ್ತಿದೆ. ಆದ್ದರಿಂದ ಬೇಸಿಗೆ ಕಾಲ ಮುಗಿಯುವವರೆಗೆ ಅಂದರೆ ಮಾರ್ಚ್ 15 ರಿಂದ ಮೇ 31ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಬೇಸಿಗೆ ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ಹೈಕೋರ್ಟಿಗೆ ಮನವಿ ಪತ್ರ ಸಲ್ಲಿಸಿತ್ತು. ಈ ಮನವಿ ಪತ್ರವನ್ನಾಧರಿಸಿ, ಹೈಕೋರ್ಟ್ ನ್ಯಾಯಾಲಯಗಳ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್ ಧರಿಸಲು ವಿನಾಯ್ತಿ ನೀಡಲಾಗಿದೆ. ಆದರೆ ಈ ವಿನಾಯಿತಿ ಕಪ್ಪು ಕೋಟ್ ಧರಿಸುವುದಕ್ಕಷ್ಟೇ ಮೀಸಲಾಗಿದ್ದು, ಆದರೆ ಬಿಳಿ ಶರ್ಟ್ ಮತ್ತು ನೆಕ್ ಬ್ಯಾಂಡ್ ಧಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಅಂದರೆ ಎಸಿ ವ್ಯವಸ್ಥೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ತಾರಕೇರುತ್ತಿದ್ದು ಈ ಸಂದರ್ಭದಲ್ಲಿ ತುಂಬಾನೇ ಕಷ್ಟವೆನಿಸುತ್ತಿದೆ. ಶೆಕೆಯನ್ನು ಸಹಿಸಲಾಗದ ಪರಿಸ್ಥಿತಿ ವಕೀಲರಿಗೆ ಎದುರಾಗುತ್ತಿದೆ. ಹಾಗಾಗಿ ಕಪ್ಪು ಕೋಟ್ ಧರಿಸುವುದರಿಂದ ಬೇಸಿಗೆಕಾಲ ಮುಗಿದು ನ್ಯಾಯಾಲಯಗಳು ಕೆಲಸ ಪುನರಾರಂಭಿಸುವವರೆಗೆ ಮಾರ್ಚ್ 15 ರಿಂದ ಅನ್ವಯವಾಗುವಂತೆ ವಿನಾಯಿತಿ ನೀಡಬೇಕು ಎಂದು ವಕೀಲರ ಸಂಘ ಕೋರಿತ್ತು. ಹೈಕೋರ್ಟ್ ಇದಕ್ಕೆ ಸಮ್ಮತಿ ನೀಡಿದೆ.

Post a Comment

0 Comments