6 ತಾಣಗಳ ಸೇರ್ಪಡೆಯಿಂದ ತಾತ್ಕಾಲಿಕ ಪಟ್ಟಿಯಲ್ಲಿರುವ ಒಟ್ಟು ಭಾರತದ ತಾಣಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವನ್ನು ಘೋಷಿಸಲು ಈ ಪಟ್ಟಿಯಲ್ಲಿರುವ ತಾಣಗಳನ್ನು ಪರಿಶೀಲನೆ ನಡೆಸುತ್ತದೆ. ತಾತ್ಕಾಲಿಕ ಪಟ್ಟಿಗೆ ಸೇರಿದ ತಾಣಗಳಾದ ಛತ್ತೀಸ್ಗಡದ ಕಾಂಗಾರ್ ಕಣಿವೆ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್ ನಲ್ಲಿರುವ ಶಿಲಾಯುಗದ 'ಮೆನ್
ಹಿರ್ಸ್', ಮೌರ್ಯರು ಆಡಳಿತ ಅಶೋಕ ಶಾಸನ ತಾಣಗಳ ಸರಣಿ, ಚೌಸತ್ ಯೋಗಿನಿ ದೇವಾಲಯಗಳು ಸರಣಿ, ಉತ್ತರ ಭಾರತದ ಗುಪ್ತ ದೇವಾಲಯಗಳು ಹಾಗೂ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಬುಂದೇಲರ ಅರಮನೆ-ಕೋಟೆಗಳು ಸೇರಿವೆ.
0 Comments