ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಪದವಿ ಶಿಕ್ಷಣ

ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಪದವಿ ಮಾಡಲಿಕ್ಕೆ ಸ್ವ ವಿದ್ಯಾರ್ಥಿಗಳಿಗೆ ಉಚಿತ ಪದವಿ ಶಿಕ್ಷಣ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದೇ ಪ್ರಥಮ ಬಾರಿಗೆ ಸರಕಾರಿ ಕಾಲೇಜೊಂದರಲ್ಲಿ ಪದವಿ ಶಿಕ್ಷಣ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ಉಚಿತ ಪದವಿ ಶಿಕ್ಷಣ ನೀಡುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗುತ್ತಿದ್ದು, ಬಿಎ, ಬಿಕಾಂ, ಬಿಸಿಎ ಕೋರ್ಸ್ ಗಳಿಗೆ ಮೊದಲು ಪ್ರವೇಶಾತಿ ಪಡೆಯುವ 100 ವಿದ್ಯಾರ್ಥಿಗಳಿಗೆ ಈ ಉಚಿತ ಶಿಕ್ಷಣದ ಅವಕಾಶ ಸಿಗಲಿದೆ.
ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಉಚಿತ ಪದವಿ ಶಿಕ್ಷಣದೊಂದಿಗೆ ಇನ್ನಿತರ ವಿಶೇಷ ಸೌಲಭ್ಯಗಳೂ ವಿದ್ಯಾರ್ಥಿಗಳಿಗೆ ಸಿಗಲಿದೆ. ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಭೋಜನದ ವ್ಯವಸ್ಥೆ ಇರಲಿದೆ. ಅಷ್ಟೇ ಅಲ್ಲದೆ ಕೌಶಲ್ಯಾಧಾರಿತ ವೃತ್ತಿ ತರಬೇತಿ ಕಾರ್ಯಗಾರಗಳು ಉಚಿತವಾಗಿ ಸಿಗಲಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಸರಕಾರಿ ಬಸ್ಸು ಸೌಲಭ್ಯವು ಇದೆ. ಕಾಲೇಜಿನಲ್ಲಿ ಅನುಭವವುಳ್ಳ ಪ್ರಾಧ್ಯಾಪಕ ವೃಂದವಿದ್ದು ಸುಸಜ್ಜಿತ ತರಗತಿ ಕೊಠಡಿಗಳು, ಪಿಪಿಟಿ ಸೌಲಭ್ಯಗಳು, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯ ಮತ್ತು ಇಂಟರ್ನೆಟ್ ಸೌಲಭ್ಯ, ಉದ್ಯೋಗ ಆಧಾರಿತ ಸಂವಹನ ಕೌಶಲಗಳು ಮತ್ತು ಉಚಿತ ಉದ್ಯೋಗ ಸಂದರ್ಶನ ತರಬೇತಿ, ಗ್ರಾಮೀಣ ಕಸುಬುಗಳು, ಗುಡಿ ಕೈಗಾರಿಕೆಗಳ ಪರಿಚಯ ಮತ್ತು ಪರಿಣತರಿಂದ ತರಬೇತಿಯನ್ನೂ ನೀಡಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ಈ ಉಚಿತ ಶಿಕ್ಷಣದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸುವ ಕೆಲಸವನ್ನು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ ಸುಬ್ಬಪ್ಪ ಕೈಕಂಬ (9448328095,7975546398), ಮಹಾ ಪ್ರಾಧ್ಯಾಪಕರಾದ ಪ್ರೊ. ಹರೀಶ್ ನಾಯಕ್ ಎನ್ (9448911944), ಸಹಾಯಕ ಪ್ರಾಧ್ಯಾಪಕರಾದ ಡಾ. ಹರಿಣಾಕ್ಷಿ ಎಮ್ ಡಿ (9242458080) ಇವರನ್ನು ಸಂಪರ್ಕಿಸಬಹುದಾಗಿದೆ.

Post a Comment

0 Comments