ವಿಶ್ವ ಪರಿಸರ ಸಮ್ಮೇಳನ: ಅಮೆಜಾನ್ ಅರಣ್ಯಕ್ಕೇ ಕೊಡಲಿಯೇಟು

ಬ್ರೆಜಿಲ್ ನಲ್ಲಿ ಮುಂದಿನ ನವಂಬರ್ ತಿಂಗಳಲ್ಲಿ ನಿಗದಿಯಾಗಿರುವ ಪರಿಸರ ಸಮ್ಮೇಳನಕ್ಕಾಗಿ ರಸ್ತೆ ನಿರ್ಮಿಸಲು ನಿರ್ಧರಿಸಿದ್ದು, ಈ ಉದ್ದೇಶದಿಂದ ಅಮೆಜಾನ್ ಮಳೆಕಾಡಿನಲ್ಲಿ ಸುಮಾರು 13 ಕಿಲೋ ಮೀಟರ್ ಗಳಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ. ಬ್ರೆಜಿಲ್ ಈಶಾನ್ಯ ಭಾಗದಲ್ಲಿ ಬೆಲೆಂ ನಗರದಲ್ಲಿ ಸಮ್ಮೇಳನಕ್ಕಾಗಿ ವಿದೇಶಿ ಗಣ್ಯರು ಸೇರಿ ಸುಮಾರು ಐವತ್ತು ಸಾವಿರ ಅತಿಥಿಗಳು ಭಾಗವಹಿಸಲಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಉಂಟಾಗಬಾರದೆಂಬ ಉದ್ದೇಶದಿಂದ ಚತುಷ್ಪಥ ಹೆದ್ದಾರಿ ನಿರ್ಮಿಸಲು ಬ್ರೆಜಿಲ್ ಸರ್ಕಾರ ಮುಂದಾಗಿದ್ದು ಅಮೆಜಾನ್ ಅರಣ್ಯ ನಾಶ ಮಾಡಿದೆ.
ಅಮೆಜಾನ್ ಕಾಡು ಅತಿ ಸೂಕ್ಷ್ಮಜೀವಿಗಳಿಗೆ ಮನೆಯಾಗಿದ್ದು ಕಾಡು ನಾಶಗಳಿಂದ ಇವು ಅಳಿದು ಹೋಗುತ್ತವೆ. ಅಷ್ಟೇ ಅಲ್ಲದೆ ಅಮೆಜಾನ್ ಕಾಡು ಅತಿ ಹೆಚ್ಚು ಕಾರ್ಬನ್ ಗುಣವನ್ನು ಸೆಳೆದುಕೊಳ್ಳುತ್ತಿದ್ದು ಈ ಕಾಡು ನಾಶದಿಂದ ಕಾರ್ಬನ್ ಪ್ರಮಾಣ ಹೆಚ್ಚಾಗಲಿದೆ ಎಂದು ಪರಿಸರವಾದಿಗಳು ಕಿಡಿ ಕಾರಿದ್ದಾರೆ. ಅಮೆಜಾನ್ ಕಾಡು ಜಗತ್ತಿಗೆ ಇಂಗಾಲವನ್ನು ಹೀರಿಕೊಳ್ಳುವಲ್ಲಿ ಮತ್ತು ಜೀವ ವೈವಿಧ್ಯತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ಅರಣ್ಯ ನಾಶವು ಹವಾಮಾನ ಶೃಂಗ ಸಭೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಪರಿಸರ ತಜ್ಞರು ಹೇಳಿದ್ದಾರೆ. ಆದರೆ ಸರಕಾರ ಈ ವಿಧಾನವನ್ನು ಸುಸ್ಥಿರ ಪರಿಸರದ ಮಾರ್ಗ ಎಂದು ಹೇಳಿದೆ. 




Post a Comment

0 Comments