ನರೇಂದ್ರ ಕಾಲೇಜು ತೆಂಕಿಲದಲ್ಲಿ ವ್ಯವಹಾರ ತರಬೇತಿ ಕಾರ್ಯಕ್ರಮ

ನರೇಂದ್ರ ಪದವಿ ಪೂರ್ವ ಕಾಲೇಜಿನ ತೆಂಕಿಲ ಇಲ್ಲಿನ ವಾಣಿಜ್ಯ ವಿಭಾಗ ಮತ್ತು ಹೆಚ್ಇಎಫ್ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ರಿಟೇಲ್ ಬಿಸಿನೆಸ್ ತರಬೇತಿ ಕಾರ್ಯಕ್ರಮವು ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.


ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರಿನ ಏಳ್ತಿಮಾರ್ ಟ್ರೇಡರ್ಸ್ ಮಾಲಕರಾದ ಶ್ರೀಮತಿ ವಿಜಯಲಕ್ಷ್ಮಿ ಶೆಣೈ ಮಾರಾಟ ಮತ್ತು ಗ್ರಾಹಕ ಸೇವೆಯ ಅಗತ್ಯತೆ, ವ್ಯಾಪಾರ ಜೀವನದ ಹಾದಿ ಮತ್ತು ಸವಾಲುಗಳು, ವ್ಯವಹಾರಗಳಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕು, ಯುವಜನತೆಗೆ ಉದ್ಯಮಶೀಲತೆಯ ಮಹತ್ವ, ತಂತ್ರಜ್ಞಾನ ಮತ್ತು ಮಾರಾಟ ಈ ವಿಷಯಗಳ ಕುರಿತು ಮಾಹಿತಿ ನೀಡಿದರು.

ಈ ಮಾಹಿತಿ ಕಾರ್ಯಗಾರದ ಬಳಿಕ ವಿಜಯಲಕ್ಷ್ಮಿ ಅವರು ವಿದ್ಯಾರ್ಥಿಗಳಿಗೆ ಹಣಕ್ಕೂ ಮಾರ್ಕೆಟಿಂಗ್ ಅಭ್ಯಾಸದ ಚಟುವಟಿಕೆಯನ್ನು ಮಾಡಿಸಿದರೆ ಈ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ಒಂದೊಂದು ವಸ್ತುಗಳನ್ನು ಇತರರಿಗೆ ಸೇಲ್ ಮಾಡುವ ಮೂಲಕ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕುರಿತು ಕಿರು ಅನುಭವವನ್ನು ಪಡೆದುಕೊಂಡರು.

ಮುಲಿಯಾ ಜ್ಯುವೆಲ್ಲರ್ಸ್ ಪುತ್ತೂರು ಇದರ ಆಡಳಿತ ನಿರ್ದೇಶಕಿ ಹಾಗೂ ಹೆಚ್ಈಎಫ್ ಮಹಿಳಾ ಘಟಕದ ಅಧ್ಯಕ್ಷ ಯಾಗಿರುವ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮವನ್ನು ನಿರ್ದೇಶಿಸಿದರು. ವಿತ್ ಮಾರ್ಕೆಟಿಂಗ್ ನಿರ್ದೇಶಕಿ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಶ್ರೀಮತಿ ಶರಾವತಿ ರವಿ ನಾರಾಯಣ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನಭಾಗ್, ಸಂಚಾಲಕರಾದ ಸಂತೋಷ್ ಬಿ, ತರಬೇತಿದಾರರಾದ ಕೃಷ್ಣ ಮೋಹನ್, ಹೆಚ್ಇಎಫ್ ಮಹಿಳಾ ಘಟಕದ ಸದಸ್ಯರಾದ ಮಹಾಲಕ್ಷ್ಮಿ ಕೊಂಬೆಟ್ಟು, ಶೈಲಾ ರಾಜೇಶ್ ಉಪಸ್ಥಿತರಿದ್ದರು. ಹೆಚ್ಇಎಫ್ ಯುವ ಘಟಕದ ಅಧ್ಯಕ್ಷ ಮುಕುಂದಾ ಶಾಮ್, ಕಾರ್ಯದರ್ಶಿ ಪುನಿತ್ ಉಪಸ್ಥಿತರಿದ್ದು ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments