ಸ್ವಸ್ತಿ| ಶ್ರೀ ಕ್ರೋಧಿ ನಾಮ ಸಂವತ್ಸರದ ಮೀನ ಸಕ್ರಮಣದಿಂದ ಮೀನಾ ಮಾಸ ೯ ರವರೆಗೆ, ಅಂದರೆ ದಿನಾಂಕ 14.03.2025 ರಿಂದ 23.03.2025 ರವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಪರಿವಾರದೈವಗಳಿಗೆ ಬಂಡಾರ ಹಿಡಿದು ನೇಮೋತ್ಸವ ನಡೆಯಲಿದೆ. ಹಾಗೆಯೇ ದಿನಾಂಕ 24.03.2025ರಂದು ಶ್ರೀ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ನಡೆಯಲಿದೆ.
ದಿನಾಂಕ 14.03.2025 ಶುಕ್ರವಾರ
ಪೂರ್ವಾಹ್ನ ಗಂಟೆ 8.00ರಿಂದ: ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ, ಕಳಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 7:00ಯಿಂದ: ಧ್ವಜಾರೋಹಣ ನೆರವೇರಿ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ದಿನಾಂಕ 15.03.2025 ನೇ ಶನಿವಾರ
ಮಧ್ಯಾಹ್ನ 12 ಗಂಟೆಯಿಂದ ಮಹಾಪೂಜೆ, ನಿತ್ಯ ಬಲಿ ಪ್ರಸಾದ ವಿತರಣೆ
ರಾತ್ರಿ 7:00 ಯಿಂದ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನೆರವೇರಲಿದೆ.
ದಿನಾಂಕ 16.3.2025 ಆದಿತ್ಯವಾರ
ಮಧ್ಯಾಹ್ನ 12 ಗಂಟೆಯಿಂದ: ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ
ಸಂಜೆ 5:00ಯಿಂದ: ದೈವಗಳ ಭಂಡಾರ ತೆಗೆಯುವುದು
ರಾತ್ರಿ ಗಂಟೆ 8:30 ರಿಂದ: ಅರಸು ಉಳ್ಳಾಯ, ಮಹಿಷಂತಾಯ ಮತ್ತು ರಕ್ತೇಶ್ವರಿ ದೈವಗಳ ನರ್ತನೋತ್ಸವ
ದಿನಾಂಕ 17.3.2025ನೇ ಸೋಮವಾರ
ಮಧ್ಯಾಹ್ನ 12 ಗಂಟೆಯಿಂದ: ಮಹಾಪೂಜೆ, ನಿತ್ಯ ಬಲಿ ಪ್ರಸಾದ ವಿತರಣೆ
ಸಂಜೆ ಗಂಟೆ 5:00 ರಿಂದ: ದೈವಗಳ ಭಂಡಾರ ತೆಗೆಯುವುದು.
ಸಂಜೆ ಗಂಟೆ 6:00 ರಿಂದ: ಉಗ್ರಾಣ ಮುಹೂರ್ತ, ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ.
ರಾತ್ರಿ ಗಂಟೆ 9:00 ರಿಂದ: ಧೂಮಾವತಿ, ಬಂಟ ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ.
ದಿನಾಂಕ 18.03.2025 ನೇ ಮಂಗಳವಾರ
ಪೂರ್ವಾಹ್ನ ಗಂಟೆ 7.00ರಿಂದ: ಬಲಿ ಹೊರಟು ಉತ್ಸವ
ಮಧ್ಯಾಹ್ನ ಗಂಟೆ 12 ರಿಂದ: ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ.
ಸಂಜೆ ಗಂಟೆ 6:30 ರಿಂದ: ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ.
ದಿನಾಂಕ 19.03.2025ನೇ ಬುಧವಾರ
ಪೂರ್ವಾಹ್ನ ಗಂಟೆ 7.00ರಿಂದ: ಬಲಿ ಹೊರಟು ಉತ್ಸವ
ಮಧ್ಯಾಹ್ನ ಗಂಟೆ 12 ರಿಂದ: ಮಹಾಪೂಜೆ, ನಿತ್ಯಬಲಿ ಪ್ರಸಾದ ವಿತರಣೆ
ಸಂಜೆ ಗಂಟೆ 4:30 ರಿಂದ: ಬಲಿ ಹೊರಟು ಉತ್ಸವ, ಆಲಂಕಾರು., ಪೇಟೆ ಸವಾರಿ, ಆಲಂಕಾರು ಸಾರ್ವಜನಿಕ ಕಟ್ಟೆ ಪೂಜೆಗಳು, ಮಹಾಪೂಜೆ, ಭೂತ ಬಲಿ, ಪ್ರಸಾದ ವಿತರಣೆ.
ದಿನಾಂಕ 20.03.2025ನೇ ಗುರುವಾರ
ಪೂರ್ವಾಹ್ನ ಗಂಟೆ 7.00 ರಿಂದ: ಬಲಿ ಹೊರಟು ಉತ್ಸವ
ಮಧ್ಯಾಹ್ನ ಗಂಟೆ 12 ರಿಂದ: ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ
ಸಾಯಂಕಾಲ 6.30ರಿಂದ: ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತ ಬಲಿ, ಪ್ರಸಾದ ವಿತರಣೆ
ದಿನಾಂಕ 21.03.2025ನೇ ಶುಕ್ರವಾರ
ಪೂರ್ವಾಹ್ನ ಗಂಟೆ 8.30ರಿಂದ: ಬಲಿ ಹೊರಟು ಉತ್ಸವ
ಮಧ್ಯಾಹ್ನ ಗಂಟೆ 12.00ಕ್ಕೆ: ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ.
ಮಧ್ಯಾಹ್ನ 1:00 ಯಿಂದ: ಮಹಾ ಅನ್ನಸಂತರ್ಪಣೆ
ಸಂಜೆ ಗಂಟೆ 6:30 ರಿಂದ: ಸವಾರಿ ಮಂಟಪ ಕಟ್ಟೆ ಪೂಜೆಗಳು, ಕೆರೆ ಉತ್ಸವ, ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ
ದಿನಾಂಕ 22/3/2025ನೇ ಶನಿವಾರ
ಪೂರ್ವಾಹ್ನ ಗಂಟೆ 6.00ರಿಂದ: ಬಲಿ ಹೊರಟು ಉತ್ಸವ
ಪೂರ್ವಾಹ್ನ ಗಂಟೆ 10.00ರಿಂದ: ಆಶ್ಲೇಷ ಬಲಿ
ಮಧ್ಯಾಹ್ನ ಗಂಟೆ 12.00ಕ್ಕೆ: ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ
ರಾತ್ರಿ ಗಂಟೆ 9.00 ರಿಂದ: ಶ್ರೀ ಮಹಾರಥೋತ್ಸವ
ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತ ಬಲಿ, ಕವಾಟ ಬಂಧನ
ದಿನಾಂಕ 23.03.2025ನೇ ರವಿವಾರ
ಪೂರ್ವಾಹ್ನ ಗಂಟೆ 8.00ರಿಂದ: ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ
ಪೂರ್ವಾಹ್ನ ಗಂಟೆ 10.00ರಿಂದ: ಯಾತ್ರಾ ಹೋಮ
ಮಧ್ಯಾಹ್ನ ಗಂಟೆ 12.00ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ
ಅಪರಾಹ್ನ ಗಂಟೆ 3:30 ರಿಂದ 5:30ರ ವರೆಗೆ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಆಲಂಕಾರು ಇವರ ಪ್ರಾಯೋಜಕತ್ವದಲ್ಲಿ ಸೌಪರ್ಣಿಕಾ ಮ್ಯೂಸಿಕ್ಸ್, ಕಡಬ ಇವರಿಂದ "ಭಕ್ತಿ ರಸಮಂಜರಿ ಕಾರ್ಯಕ್ರಮ"
ಸಂಜೆ ಗಂಟೆ 5:00 ರಿಂದ: ಅವಭೃತ ಮೆರವಣಿಗೆ, ಕಟ್ಟೆ ಪೂಜೆಗಳು, ಶಾಂತಿಮೊಗರು ಕುಮಾರಧಾರೆಯಲ್ಲಿ ಅವಭೃತ ಸ್ನಾನ, ಧ್ವಜಾವರೋಹಣ.
ದಿನಾಂಕ 24.3.2025ನೇ ಸೋಮವಾರ
ಪೂರ್ವಾಹ್ನ ಗಂಟೆ 9:00 ರಿಂದ: ಶರವೂರು ಶ್ರೀ ಸುಬ್ರಹ್ಮಣ್ಯರಾವ್ ಮತ್ತು ಮನೆಯವರಿಂದ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮ
ಮಧ್ಯಾಹ್ನ ಗಂಟೆ 12 ರಿಂದ: ಅಯ್ಯಪ್ಪ ಭಕ್ತವೃಂದ ಶರವೂರು, ಆಲಂಕಾರು ಮತ್ತು ರಾಮಕುಂಜ-ಇವರಿಂದ ಗಂಜಿ ಊಟ ಸೇವೆ.
ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಭಕ್ತ ಅಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ. ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ತಾವೆಲ್ಲರೂ ಬಂದು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
0 Comments