ಅಗ್ನಿಪಥ ಯೋಜನೆಯಡಿ ಮಹಿಳಾ ಅಗ್ನಿವೀರರ ನೇಮಕಾತಿಗೆ ಸೂಚನೆ

ಅಗ್ನಿಪಥ ಯೋಜನೆಯಲ್ಲಿ ಜನರಲ್ ಡ್ಯೂಟಿ ವಿಭಾಗಕ್ಕೆ ಮಾತ್ರ ಮಹಿಳಾ ನೇಮಕಾತಿ ನಡೆಯಲಿದೆ. ಬೆಂಗಳೂರು ಸೇನಾ ಕಚೇರಿ ವತಿಯಿಂದ ಈ ನೇಮಕ ಪ್ರಕ್ರಿಯೆ ನಡೆಯಲಿದ್ದು, ಈ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವ ಭಾರತೀಯ ಸೇನೆಯು 17 ವರ್ಷ ಆರು ತಿಂಗಳಿಂದ 21 ವರ್ಷದೊಳಗಿನ ಮಹಿಳೆಯರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು: 
ಈ ಹುದ್ದೆಗಳಿಗೆ ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಿಗದಿಪಡಿಸಲಾಗಿದೆ. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡ 45 ಅಂಕ ಪಡೆದು ತೇರ್ಗಡೆ ಹೊಂದಿರಬೇಕು. ಮಹಿಳಾಸೇನಾ ಸಿಬ್ಬಂದಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ. ಮಹಿಳೆಯರು ವಿಧವೆಯರು ಕಾನೂನು ಪ್ರಕಾರ ಪತಿಯಿಂದ ಬೇರ್ಪಟ್ಟ (ಮಕ್ಕಳನ್ನು ಹೊಂದಿರದ) ಮಹಿಳೆಯರು ಕೂಡ ಅರ್ಜಿ ಸಲ್ಲಿಸಿ ರ್‍ಯಾಲಿಯಲ್ಲಿ ಭಾಗವಹಿಸುವ ಅವಕಾಶವಿದೆ. ಸೇನಾ ಕರ್ತವ್ಯದಲ್ಲಿರುವಾಗ ಮರಣವನ್ನಪ್ಪಿದ ಯೋಧರ ಪತ್ನಿಯರು ಕೂಡ ಅರ್ಜಿ ಸಲ್ಲಿಸಬಹುದು. ಇಂತಹ ಮಹಿಳೆಯರು ಮಕ್ಕಳಿದ್ದರೂ ಅಂದರೆ ಮರು ಮದುವೆಯಾಗದೆ ಇದ್ದಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ಸೇನೆ ತಿಳಿಸಿದೆ.

ಅಭ್ಯರ್ಥಿಗಳ ಎತ್ತರ 162 ಸೆಂಟಿಮೀಟರ್ ಇರಬೇಕಾಗಿದ್ದು ಇದಕ್ಕೆ ಅನುಗುಣವಾಗಿ ಶರೀರದ ತೂಕವನ್ನು ಹೊಂದಿರಬೇಕು. 5 ಸೆಂಟಿ ಮೀಟರ್ ಎದೆಯ ವಿಸ್ತರಣೆ ಹೊಂದಿರಬೇಕು.

ಅವಿವಾಹಿತ ಮಹಿಳೆಯರಿಗೆ ಮಾತ್ರ ಈ ಹುದ್ದೆಗೆ ಸೇರಲು ಅವಕಾಶ. ಆದರೆ ಒಂದು ವೇಳೆ ಅಭ್ಯರ್ಥಿಗಳು ನೇಮಕಗೊಂಡಲ್ಲಿ ಸೇವೆಗೆ ಸೇರಿದ ನಾಲ್ಕು ವರ್ಷಗಳ ಕಾಲ ವಿವಾಹವಾಗುವಂತಿಲ್ಲ. ಒಂದು ವೇಳೆ ಸೇನೆಯ ನಿಯಮಗಳನ್ನು ಉಲ್ಲಂಘಿಸಿ ವಿವಾಹವಾದದ್ದೇ ಆದಲ್ಲಿ ಅಂತಹ ಅಭ್ಯರ್ಥಿಗಳನ್ನು ಸೇವೆಯಿಂದ ವಜಗೊಳಿಸಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಪ್ರಿಲ್ 10 ತಾರೀಖಿನವರೆಗೆ ಅವಕಾಶವಿದೆ.

ಮಹಿಳಾ ಅಗ್ನಿವಿರರಿಗೆ ಬೆಂಗಳೂರಿನಲ್ಲಿ ಮಾತ್ರ ರ್‍ಯಾಲಿ ಇರಲಿದೆ. ಹೆಚ್ಚಿನ ಮಾಹಿತಿಗಾಗಿ joinindianarmy.nic.in ವೆಬ್ಸೈಟ್ ಅನ್ನು ಭೇಟಿ ಆಗಬಹುದು.

Post a Comment

0 Comments