ಐಸಿಸಿ ಚಾಂಪಿಯನ್ ಟ್ರೋಫಿ ಇದೆ ಮೇ ತಿಂಗಳ 19ರಿಂದ ಆರಂಭವಾಗಲಿದ್ದು, ಈ ಪಂದ್ಯಾಟಕ್ಕೆ ಐಸಿಸಿಯು ನಾಲ್ಕು ರಾಯಭಾರಿಗಳನ್ನು ನೇಮಿಸಿದೆ. ಇದರಲ್ಲಿ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಶಿಖರ್ ಧವನ್ ಕೂಡ ಆಯ್ಕೆಯಾಗಿದ್ದಾರೆ.
ಐಸಿಸಿ ಚಾಂಪಿಯನ್ ಟ್ರೋಪಿಗೆ ನೇಮಕ ಮಾಡಿರುವ ನಾಲ್ವರು ರಾಯಭಾರಿಗಳಲ್ಲಿ ಹೊರತುಪಡಿಸಿ 2017ರ ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಪ್ ಖಂಡದ ನಾಯಕ ಸರ್ಫರಾಜ್ ಅಹಮದ್, ನ್ಯೂಜಿಲ್ಯಾಂಡ್ ವೇಗಿ ಟಿಮ್ ಸೌಥಿ, ಹಾಗೂ ಆಸ್ಟ್ರೇಲಿಯಾದ ಮಾಜಿ ಆಲ್-ರೌಂಡರ್ ಶೇನ್ ವ್ಯಾಟ್ಸನ್ ಕೂಡ ರಾಯಭಾರಿಯಾಗಿರಲಿದ್ದಾರೆ.
ಈ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿಖರ್ ಧವನ್ “ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿರುವುದು ವಿಶೇಷ ಅನುಭವ, ರಾಯಭಾರಿ ಆಗುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ” ಎಂದಿದ್ದಾರೆ. ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದು, ಎರಡು ಆವೃತ್ತಿಗಳಲ್ಲಿ 701 ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
0 Comments