ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯಂತೆ. ಅನಿಶ್ಚಿತ..!! ಆದ್ದರಿಂದ ಜೀವ ಹಾಗೂ ಜೀವನಕ್ಕೆ ಭದ್ರತೆ ಎಂಬುದೇ ಇಲ್ಲ. ಆದರೆ ನಾವು ನಮ್ಮ ಕುಟುಂಬದವರಿಗಾಗಿ ಅಥವಾ ನಮ್ಮ ಅವಲಂಬಿತರಿಗಾಗಿ ಆರ್ಥಿಕ, ಆರೋಗ್ಯದ ಭದ್ರತಾ ವಿಮಾ ಯೋಜನೆಗಳನ್ನು ಮಾಡಿಕೊಂಡರೆ ಎಲ್ಲರಿಗೂ ತುಂಬಾ ಪ್ರಯೋಜನಕಾರಿ.
ಎಲ್ಐಸಿ ಎಂಬುದು ಭಾರತದ ಅತೀ ದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಪ್ರತೀ ಮನೆಗಳಲ್ಲೂ ಎಲ್ಐಸಿ ಚಂದಾದಾರು ಇದ್ದೇ ಇರುತ್ತಾರೆ. ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುವವರು ಪ್ರತಿಯೊಬ್ಬರಲ್ಲೂ ವಿಮೆ ಮಾಡಿಸಿಕೊಳ್ಳುವಂತೆ ಮಾಹಿತಿಗಳನ್ನು ನೀಡುತ್ತಾರೆ. ಈ ವಿಮಾ ಯೋಜನೆಗಳು ನಮ್ಮ ಹಾಗೂ ನಮ್ಮ ಕುಟುಂಬದ ಭವಿಷ್ಯಕ್ಕೆ ಆರ್ಥಿಕವಾಗಿ ಭದ್ರತೆಯನ್ನು ನೀಡುತ್ತದೆ. ಎಲ್ಐಸಿಯಲ್ಲಿ ಹೂಡಿಕೆ ಮಾಡಿ ಅದರ ಅವಧಿ ಮುಗಿದ ಮೇಲೆ ಅದರ ಸೌಲಭ್ಯವನ್ನು ನಾವು ಬಳಸಿಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆದರೆ. ಎಲ್ಐಸಿ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ವಾರಸುದಾರರಿಲ್ಲದೆ ಬಳಕೆಯಾಗದೆ ಉಳಿದಿದೆ.2023-2024ರ ಆರ್ಥಿಕ ವರ್ಷದಲ್ಲಿ 880.93 ಕೋಟಿ ರೂಪಾಯಿಗಳು ಕ್ಲೈಮ್ ಮಾಡದ ಮೆಚುರಿಟಿ ಮೊತ್ತವಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಇತ್ತೀಚೆಗೆ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಎಲ್ಐಸಿ ಕಂಪನಿಯಲ್ಲಿ ಜೀವ ವಿಮೆ ಮಾಡಿ ನಾನಾ ಕಾರಣಗಳಿಂದ 3,72,282 ಲಕ್ಷ ಪಾಲಿಸಿದಾರರು ತಮ್ಮ ಪಾಲಿಸಿಯ ಮೆಚ್ಯುರಿಟಿ ಮೊತ್ತವನ್ನು ಪಡೆಯದೆ 880.93 ಕೋಟಿ ರೂಪಾಯಿ ಬಾಕಿ ಉಳಿದಿದೆ. ಪ್ರಾಕೃತಿಕ ವಿಪತ್ತು, ಅಪಘಾತದಲ್ಲಿ ಸಾವು ಹೀಗೆ ನಾನಾ ಬಗೆಯ ಕಾರಣಗಳಿಂದ ಪಾಲಿಸಿದಾರರು ಎಲ್ಐಸಿ ವಿಮಾ ಯೋಜನೆಯ ಮೊತ್ತವನ್ನು ಕ್ಲೈಮ್ ಮಾಡಲು ಸಾಧ್ಯವಾಗಿರುವ ಸಾಧ್ಯತೆಗಳಿರುತ್ತದೆ.
ಕೆಲವು ಮನೆಗಳಲ್ಲಿ ಪೋಷಕರು ಅಥವಾ ಅಜ್ಜ ಅಜ್ಜಿ ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರಲ್ಲಿ ಅವರ ಭವಿಷ್ಯಕ್ಕಾಗಿ ಎಲ್ಐಸಿ ಜೀವವಿಮೆಗಳನ್ನು ಮಾಡಿರುತ್ತಾರೆ. ಈ ವಿಷಯ ಪಾಲಿಸಿದಾರರಿಗೆ ತಿಳಿದಿರುವುದಿಲ್ಲ. ಅಥವಾ ಕೆಲವರು ವಿಮೆಗೆ ಸಂಬಂಧಿಸಿದ ಬಾಂಡ್ ಅನ್ನು ಕಳೆದುಕೊಂಡಿರಬಹುದು. ಇನ್ನೂ ಕೆಲವರು ಯಾರದೋ ಹೆಸರಲ್ಲಿ ವಿಥ್ಮೆ ಮಾಡಿ ಮರಣ ಹೊಂದಿದ್ದು, ಪಾಲಿಸಿದಾರರಿಗೆ ಈ ಬಗ್ಗೆ ಮಾಹಿತಿ ಇರದಿರಬಹು. ಅಷ್ಟೇ ಅಲ್ಲದೆ ಪಾಲಿಸಿದಾರರು ವಿದೇಶದಲ್ಲಿದ್ದು ದೀರ್ಘಕಾಲದವರೆಗೆ ಬರದೇ ಇದ್ದರೆ ಆ ಕಾರಣದಿಂದಾಗಿ ಮೆಚ್ಯುರಿಟಿ ಮೊತ್ತ ಕ್ಲೈಮ್ ಮಾಡಿದೆ ಉಳಿಯಬಹುದು.
ಮೆಚ್ಯುರಿಟಿ ಮೊತ್ತವನ್ನು ಪರಿಶೀಲಿಸುವುದು ಹೇಗೆ?
ವಿಮೆ ಮಾಡಿಸಿ ಕ್ಲೈಮ್ ಮಾಡಲು ಮರೆತಿದ್ದರೆ ಆನ್ಲೈನ್ ಮೂಲಕ ಪರಿಶೀಲಿಸಿ ಮೆಚ್ಯುರಿಟಿ ಮೊತ್ತವನ್ನು ಕ್ಲೈಮ್ ಮಾಡಬಹುದು. ಆನ್ಲೈನ್ ಮೂಲಕ ಈ ಅನ್ಕ್ಲೈಮ್ಡ್ ಮೆಚ್ಯುರಿಟಿ ಮೊತ್ತವನ್ನು ಪರಿಶೀಲಿಸಲು ಅವಕಾಶವಿದೆ. ಪಾಲಿಸಿದಾರರು ಎಲ್ಐಸಿ ವೆಬ್ಸೈಟ್ https://licindia.in/home ಗೆ ಭೇಟಿ ನೀಡಿ ಗ್ರಾಹಕರ ಸೇವೆ ಎಂಬ ವಿಭಾಗಕ್ಕೆ ಹೋಗಿ ಪಾಲಿಸಿದಾರರ ಹಕ್ಕು ಪಡೆಯದ ಮೊತ್ತವನ್ನು ಆಯ್ಕೆ ಮಾಡಬೇಕು. ಕ್ಲೈಮ್ ಮಾಡಲು ಬೇಕಾಗುವ ದಾಖಲೆಗಳಾದ ಪಾಲಿಸಿ ಬಾಂಡ್ ಅಲ್ಲಿರುವ ಪಾಲಿಸಿ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಆಧಾರ್ ಮತ್ತು ಪಾನ್ ಕಾರ್ಡ್ ಸಂಖ್ಯೆಗಳನ್ನು ನಮೂದಿಸಿ ಪರೀಶೀಲನೆ ನಡೆಸಬಹುದು. ಅಥವಾ ಹತ್ತಿರದ ಎಲ್ಐಸಿ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ಮಾಡಲು ಸಾಧ್ಯವಿದೆ.
ದೀರ್ಘಾವಧಿ ಕ್ಲೈಮ್ ಮಾಡದ ಮೆಚ್ಯುರಿಟಿ ಮೊತ್ತ
ಏನಾಗುತ್ತದೆ?
ಎಲ್ಐಸಿ ಕಂಪನಿಯಲ್ಲಿ ವಾರಸುದಾರರಿಲ್ಲದೆ 10 ವರ್ಷಗಳಿಗೂ ಹೆಚ್ಚು ಕಾಲ ಮೆಚ್ಯುರಿಟಿ ಮೊತ್ತದ ಹಕ್ಕು ಪಡೆಯದೆ ಉಳಿದಿದ್ದರೆ, ಅದನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿ(SCWF)ಗೆ ವರ್ಗಾಯಿಸಲಾಗುತ್ತದೆ. ಈ ಮೂಲಕ ಆ ಹಣವನ್ನು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ.
ಆಪತ್ಕಾಲದಲ್ಲಿ ನಮಗೆ ಅಥವಾ ನಮ್ಮ ಅವಲಂಬಿತರ ಭದ್ರ ಭವಿಷ್ಯಕ್ಕಾಗಿ ಎಲ್ಐಸಿ ವಿಮೆಗಳನ್ನು ಮಾಡಿಸುತ್ತೇವೆ. ಇದು ಅಗತ್ಯ ಸಮಯದಲ್ಲಿ ಕ್ಲೈಮ್ ಆಗದೇ ಹೋದರೆ ಎಲ್ಲಾ ಪ್ರಯತ್ನಗಳು ವ್ಯರ್ಥವೆನಿಸುತ್ತದೆ. ಆದ್ದರಿಂದ ಯಾರಾದರೂ ತಮ್ಮ ಹೆಸರಲ್ಲಿ ಅಥವಾ ಇತರರ ಹೆಸರಲ್ಲಿ ವಿಮೆ ಮಾಡಿಸಿದ್ದರೆ ಪಾಲಿಸಿದಾರರಿಗೆ ಮಾಹಿತಿ ನೀಡಿ ಬಾಂಡ್ ಪೇಪರನ್ನು ಅವರಿಗೆ ಹಸ್ತಾಂತರಿಸಿ ಬಿಡಿ. ಆಗ ಎಲ್ಲರಿಗೂ ಈ ಬಗ್ಗೆ ಮಾಹಿತಿ ಇರುತ್ತದೆ. ಇದರಿಂದ ಮೇಲಿನ ಸಮಸ್ಯೆಗೆ ಪರಿಹಾರ ಸಿಕ್ಕಿ ಎಲ್ಲರ ಭವಿಷ್ಯವು ಉತ್ತಮವಾಗಿರುತ್ತದೆ.
0 Comments