ಮನುಷ್ಯನ ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಸಲಹೆ ನೀಡುವ ಹೊಸ ಆ್ಯಪ್

ಇಂಟರ್ನೆಟ್ ಯುಗದಲ್ಲಿ ಜಗತ್ತೇ ಆ್ಯಪ್ ಮಯವಾಗಿ ಹೋಗಿದೆ. ಪ್ರತಿಯೊಂದಕ್ಕೂ ಒಂದೊಂದು ಆ್ಯಪ್  ಇದ್ದೇ ಇದೆ. ಹಸಿವಾಯಿತೆಂದರೆ ತಿಂಡಿ-ತಿನಿಸುಗಳು ಮನೆ ಬಾಗಿಲಿಗೆ ಕೆಲವೇ ನಿಮಿಷಗಳಲ್ಲಿ ಬಂದು ತಲುಪುತ್ತವೆ. ಯಾವುದೋ ಒಂದು ಬಟ್ಟೆ ಇಷ್ಟವಾಯಿತೆಂದರೆ ಎರಡು ಮೂರು ದಿನಗಳಲ್ಲಿ ಅದು ಕೈ ಸೇರುತ್ತದೆ. ಅಡುಗೆ ಮನೆಯಲ್ಲಿ ಏನಾದರೂ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಬೇಕಾದರೆ ಅಮ್ಮ, ಅತ್ತೆ ನೀಡುತ್ತಿದ್ದ ಮಾಹಿತಿಯನ್ನು ಇಂದು ಅರೆಕ್ಷಣದಲ್ಲಿ ಆಪ್ ನೀಡುತ್ತದೆ. ಇಷ್ಟೆಲ್ಲ ಇರುವಾಗ ನಮ್ಮ ಬದುಕಿನ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹ ತಜ್ಞ ಪರಿಣತರ ಸಲಹೆಗಳು ಕ್ಷಣಮಾತ್ರದಲ್ಲಿ ದೊರಕಿದರೆ ಜೀವನ ಎಷ್ಟು ಅದ್ಭುತ ಎಂದೆನಿಸುವುದು ಸಹಜ ಅಲ್ವಾ…ಇಂತಹ ಒಂದು ವಿಶೇಷ ಅಪ್ಲಿಕೇಶನ್ ಅನ್ನು ನಮ್ಮ ಬೆಂಗಳೂರಿನ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿದೆ. ಮಾತ್ರವಲ್ಲದೆ ಬ್ಲಿಂಕಿಟ್, ಜೆಪ್ಟೋ ಮತ್ತು ಇನ್ಸ್ಟಾ ಮಾರ್ಟ್ ಕಾಲ ಮುಗಿದಿದೆ. ಈ ಅಪ್ಲಿಕೇಶನ್ ಕೇವಲ 10 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವುದರ ಬದಲಿಗೆ ಮನುಷ್ಯರನ್ನೇ ತಲುಪಿಸಿ ಸೇವೆಯನ್ನು ಒದಗಿಸುತ್ತದೆ. ಹಾಗಾದರೆ ಏನಿದು ಈ ಅಪ್ಲಿಕೇಶನ್ ನೋಡೋಣ..


ಜೀವನದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಹಲವರಿಗೆ ಬಹಳಷ್ಟು ಗೊಂದಲಗಳಿರುತ್ತವೆ. ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವ ಬಗ್ಗೆ ತಾನು ತನ್ನ ಆಸಕ್ತಿಗೆ ಅನುಗುಣವಾಗಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಸಂದೇಹಗಳಿರುತ್ತವೆ. ಇನ್ನೂ ಕೆಲವರಿಗೆ ಕೆಲಸದ ವಿಷಯದಲ್ಲಿ ತುಂಬಾನೇ ಗೊಂದಲಗಳಿರುತ್ತವೆ. ಅಥವಾ ಇನ್ಯಾವುದೋ ಬಹು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಮ್ಮನೆ ಯೋಚಿಸುತ್ತಲೇ ಕಾಲ ಕಳೆಯುತ್ತೇವೆಯೇ ವಿನಃ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವುತ್ತೇವೆ. ಉದ್ಯೋಗ ಬದಲಾವಣೆ ಅಥವಾ ಜೋಗದ ಜೊತೆಯಲ್ಲಿ ಬೇರೇನಾದರೂ ಕೆಲಸ ಅಥವಾ ಕೋರ್ಸ್ ಮಾಡುವ ಆಲೋಚನೆ ಇದ್ದರೆ, ಯಾರದಾದರೂ ಸಲಹೆ ಪಡೆದುಕೊಳ್ಳ ಬಯಸಿದ್ದೆ ಆದಲ್ಲಿ ಈ ಹೊಸ ಅಪ್ಲಿಕೇಶನ್ ಮೂಲಕ ಸುಲಭ ದಾರಿ ಇದೆ. ಬೆಂಗಳೂರು ಮೂಲದ ಟಾಪ್ ಮೇಟ್ ಎಂಬ ಸಂಸ್ಥೆ ಮಾನವ ವಿತರಣೆ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಕೇವಲ 10 ನಿಮಿಷಗಳಲ್ಲಿ ತಜ್ಞರಿಂದ ನಮಗೆ ಬೇಕಾದ ಉಪಯುಕ್ತ ಸಲಹೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


ಗ್ರಾಹಕರು ತಮ್ಮ ಕನಸಿನ ಉದ್ಯೋಗ ಯಾವುದೇ ಸಮಸ್ಯೆ ಪರಿಹಾರಕ್ಕಾಗಿ ಕೇವಲ ಹತ್ತು ನಿಮಿಷಗಳಲ್ಲಿ ಪರಿಹಾರವನ್ನು ಪಡೆದುಕೊಳ್ಳಬಹುದು. ಪ್ರತಿದಿನ ಸಂಜೆ ಆರರಿಂದ ರಾತ್ರಿ ಹತ್ತು ಗಂಟೆಯವರೆಗೆ ಗ್ರಾಹಕರು ತಜ್ಞರ ಜೊತೆ ಸಂವಾದ ನಡೆಸಲು ಈ ಕಂಪನಿಯು ಅವಕಾಶ ನೀಡುತ್ತದೆ. ಇಲ್ಲಿ ಯಾವುದೇ ಊಹ ಪೋಹಗಳಿಗೆ ಅವಕಾಶವಿಲ್ಲ. ಇನ್ನು ಮುಂದೆ ಗೂಗಲ್ ಸರ್ಚ್ ಅಗತ್ಯವಿರುವುದಿಲ್ಲ. ಅಲ್ಲಿಗೆ ಹೋದ ತಜ್ಞರಿಗೆ ತಕ್ಷಣದ ಪ್ರವೇಶ ಸಿಗುತ್ತದೆ. ಟಾಪ್ ಮೇಟ್ಸ್ ಇದಕ್ಕೆ ಗೈಡೆನ್ಸ್ ಇನ್ 10 ಮಿನಿಟ್ಸ್ ಎಂದೇ ಹೆಸರಿಟ್ಟಿದೆ.


ಮಾನವ ವಿತರಣೆ ಎಂಬ ಪರಿಕಲ್ಪನೆಯಲ್ಲಿ ಟಾಪ್ ಮೇಟ್ ಜೊತೆ ನಮ್ಮನ್ನು ಸಂಪರ್ಕಿಸುವ ಮಾನವರು ಅಥವಾ ಹ್ಯೂಮನ್ ಅಟ್ ಟಾಪ್ ಮೇಟ್ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅಷ್ಟೇ ಅಲ್ಲದೆ ಕನಸಿನ ಉದ್ಯೋಗ ಪಡೆಯಲು ಸಹಾಯ ಮಾಡುತ್ತಾರೆ. ಜೊತೆಗೆ ನಮ್ಮ ಬೆಳವಣಿಗೆಯ ಪಾಲುದಾರರು ಆಗಬಹುದು. ಹೋಮ್ ಪೇಜ್ ನಲ್ಲಿ ಒಬ್ಬರು ಐದು ನಿಮಿಷಗಳ ತಜ್ಞರ ಪ್ರತಿಕ್ರಿಯೆ ವಿಭಾಗಕ್ಕೆ ಹೋಗಿ ಹೆಸರು ಮತ್ತು ಫೋನ್ ಸಂಖ್ಯೆ ಅಂತ ವಿವರಗಳನ್ನು ನಮೂದಿಸಿ ನಂತರ ತಜ್ಞರೊಂದಿಗೆ ಕರೆಯನ್ನು ನಿಗದಿಪಡಿಸಬೇಕು ಎಂಬುದಾಗಿ ಚಂದ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇದೆ. 


ಈ ಅಪ್ಲಿಕೇಶನ್ ಪ್ರಸ್ತುತ 4.9 ಸ್ಟಾರ್ ರೇಟಿಂಗ್ ಮತ್ತು ಒಂದು ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅವರು ಮೂರು ಲಕ್ಷ ವೃತ್ತಿಪರರು ಮತ್ತು ಕ್ರಿಯೇಟರ್ಗಳ ಜಾಲದೊಂದಿಗೆ ಸಂಪರ್ಕದಲ್ಲಿರುತ್ತಾರೆ ಎನ್ನಲಾಗಿದೆ.


ಯಾವುದೇ ಒಂದು ಆಪ್ ಮನುಷ್ಯರಿಗೆ ಸಾಕಷ್ಟು ಉಪಕಾರಗಳನ್ನು ಮಾಡುತ್ತದೆ. ಆದರೆ ಆ ಆಪ್ಗಳಿಂದ ತೊಂದರೆಗಳು ಇವೆ. ಅದೇ ರೀತಿ ಟಾಪ್ ಮೇಟ್ ಕಂಪನಿಯ ಈ ಅಪ್ಲಿಕೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಹ್ಯೂಮನ್ ಡೆಲಿವರಿ ಸೇವೆಯು ಕೆಲವು ಬಳಕೆದಾರರಿಗೆ ಒಂದೇ ಕರೆಯಲ್ಲಿ ಪರಿಹಾರವನ್ನು ನೀಡಿದರೆ ಮತ್ತೆ ಕೆಲವರಿಗೆ ಈ ತಜ್ಞರ ಬಗ್ಗೆ ವಿಶ್ವಾಸಾರ್ಹತೆಯ ಅನುಮಾನವೂ ಕಾಡತೊಡಗಿದೆ. ಅಷ್ಟೇ ಅಲ್ಲದೆ ಇದು ಬ್ಲಿಂಕಿಟ್, ಜೆಪ್ಟೋ, ಸ್ವಿಗ್ಗಿ, ಐದು ಇಂಥ ಮಾರ್ಟ್ ನಂತಹ ಬಲಿಷ್ಠ ಕಂಪೆನಿಗಳಿಗೆ ಸವಾಲಲೊಡ್ಡುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಯಾವುದೇ ಬಳಕೆದಾರರು ಸಲಹೆಗಳನ್ನು ಕೇಳಿದ ಮಾತ್ರಕ್ಕೆ ಕೆಲಸ ಸಿಗದು. ಬಳಕೆದಾರನ ಹಣ ಮತ್ತು ಸಮಯದ ವ್ಯರ್ಥ ಪ್ರಯತ್ನ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. 


ಅಪ್ಲಿಕೇಶನ್ ಬಳಕೆ ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು. ಯೋಚಿಸಿ ಕಾರ್ಯ ಪ್ರವೃತ್ತಿದಾದರೆ ಯಾರಿಗೂ ಸಮಸ್ಯೆಯಿಲ್ಲ. ತಂತ್ರಜ್ಞಾನದ ಬಳಕೆ ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ.

Post a Comment

0 Comments