ಯುಪಿಐ ವಹಿವಾಟಿಗೆ ಹೊಸ ಮಾರ್ಗಸೂಚಿ ಬಿಡುಗಡೆ


ಪ್ರಸ್ತುತ ದಿನಗಳಲ್ಲಿ ಕ್ಯಾಶ್ ಲೆಸ್ ಟ್ರಾನ್ಸ್ಯಾಕ್ಷನ್ ಹೆಚ್ಚಾಗಿ ನಡೆಯುತ್ತಿದೆ. ಜನರು ವ್ಯಾಪಕವಾಗಿ ಬಳಸುತ್ತಿರುವ ಏಕೀಕೃತ ಪಾವತಿ ಇಂಟರ್ಫೇಸ್ ಅಥವಾ ಯುಪಿಐ ನಲ್ಲಿ ಫೆಬ್ರವರಿ 15 ರಿಂದ ಹೊಸ ನಿಯಮ ಜಾರಿಗೆ ಬಂದಿದೆ. 
ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇದರನ್ವಯ ಚಾರ್ಜ್ ಬ್ಯಾಕ್ ಗಳು ಸ್ವಯಂ ಚಾಲಿತವಾಗಿ ಸ್ವೀಕರಿಸಲಾಗುತ್ತದೆ ಅಥವಾ ತಿರಸ್ಕರಿಸಲಾಗುತ್ತದೆ. ಯುಪಿಐ ಪಾವತಿ ವೇಳೆ ತಾಂತ್ರಿಕ ಸಮಸ್ಯೆ, ವಿವಾದ ಅಥವಾ ವಂಚನೆ ಉಂಟಾದಾಗ ಜನರು ಚಾರ್ಜ್ ಬ್ಯಾಕ್ ಮೂಲಕ ಬ್ಯಾಂಕ್ನಿಂದ ಹಣ ವಾಪಸ್ ಪಡೆಯಬಹುದು. ಹೊಸ ನಿಯಮದನ್ವಯ ಯುಪಿಎ ವಿವಾದ ಪರಿಹಾರ ವ್ಯವಸ್ಥೆ (ಯು.ಆರ್.ಸಿ.ಎಸ್) ಯಲ್ಲಿ ಚಾರ್ಜ್ ಬ್ಯಾಕ್ ಗಳನ್ನು ಸ್ವಯಂ ಚಾಲಿತವಾಗಿ ಪರಿಹರಿಸಲಾಗುವುದು. ಈ ಹೊಸ ವ್ಯವಸ್ಥೆಯಿಂದಾಗಿ ಗ್ರಾಹಕರಿಗೆ ಒಂದು ದಿನದೊಳಗೆ ಸಮಸ್ಯೆ ಪರಿಹಾರವಾಗಿ ಹಣ ವಾಪಸ್ ಬರಲಿದೆ. ಇದರಿಂದ ದಂಡದ ಪ್ರಮಾಣವು ಕಡಿಮೆಯಾಗಲಿದೆ

Post a Comment

0 Comments