ಪಾಕ್ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ದಾಳಿ:12 ಸೈನಿಕರ ಸಾವು..!!

ಸೇನಾ ಕಾರ್ಯಾಚರಣೆಗೆ ತೆರಳುತ್ತಿದ್ದ ಪಾಕಿಸ್ತಾನದ ಸೈನಿಕರನ್ನು ಹೊತ್ತ ಸೇನಾ ಜೀಪ್ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ದಾಳಿ ನಡೆಸಿದ್ದು, 12 ಸೈನಿಕರು ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ನಲ್ಲಿ ನಡೆದಿದೆ.
ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ತೆರಳುತ್ತಿದ್ದ  ಸಂದರ್ಭದಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಗೆ ಸೇರಿದ ಭಯೋತ್ಪಾದಕರು ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನದ ಮೇಲೆ ಭೀಕರ ದಾಳಿ ಮಾಡಿ, ರಿಮೋಟ್ ಕಂಟ್ರೋಲ್ಡ್ ಐಇಡಿಯೊಂದಿಗೆ ಬೃಹತ್ ಸ್ಫೋಟ ನಡೆಸಿದೆ.ಈ ಸ್ಫೋಟದಲ್ಲಿ ಸೇನಾ ವಾಹನದಲ್ಲಿದ್ದ 12 ಸೈನಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದ್ದಾರೆ ಎಂದು ಪಾಕ್ ತಿಳಿಸಿದೆ.

ಈ ದಾಳಿಯ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಭೀಕರ ದಾಳಿಗೆ ಸೇನಾ ವಾಹನದೊಂದಿಗೆ 12 ಸೈನಿಕರು ಛಿದ್ರವಾಗಿದ್ದಾರೆ.

Post a Comment

0 Comments