ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು "ಆಪರೇಷನ್ ಸಿಂಧೂರ್" ಕಾರ್ಯಾಚರಣೆಯನ್ನು ನಡೆಸಿ 9 ಉಗ್ರ ತಾಣಗಳನ್ನು ಹೊಡೆದುರುಳಿಸಿದ ಬೆನ್ನಲ್ಲೇ ಭಾರತ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಹಳ್ಳಿ ಪ್ರದೇಶಗಳನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿದೆ. ಭಾರತದ ಮೇಲೆ ಪಾಕಿಸ್ತಾನವು ಯಾವುದೇ ಸಂದರ್ಭದಲ್ಲಿಯೂ ಇದ್ದ ಮಾಡುವ ಸಾಧ್ಯತೆ ಇದ್ದು, ಇದೀಗ ಭಾರತದ ಸೇನೆ ಮತ್ತು ಅರಸೇನಾ ಪಡೆಯ ಯೋಧರ ರಜೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಭಾರತದ ಯೋಧರು ಮತ್ತು ಅರಸೇನಾ ಪಡೆಯ ಯೋಧರ ರಜೆಯನ್ನು ರದ್ದುಗೊಳಿಸಲಾಗಿದ್ದು, ಯಾವುದೇ ಸಮಯ ಮತ್ತು ಸಂದರ್ಭದಲ್ಲಿ ಯೋಧರು ಸಿದ್ಧರಾಗಿರುವಂತೆ ಭಾರತೀಯ ಗೃಹ ಇಲಾಖೆಯು ಸೂಚನೆ ನೀಡಿದೆ. ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಲು ಸೇನೆಯು ಸನ್ನದ್ಧವಾಗಿರಬೇಕು ಎಂಬುದು ಈ ಆದೇಶದ ಗುರಿಯಾಗಿದೆ.
0 Comments