ಭಾರತ- ಪಾಕ್ ಉದ್ವಿಗ್ನತೆ ಬೆನ್ನಲ್ಲೇ ಪಾಕಿಸ್ತಾನದ ಲಾಹೋರ್ ನಲ್ಲಿ ಭೀಕರ ಸ್ಪೋಟ..!!

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸುತ್ತಿದ್ದು, ಈ ಮೂಲಕ ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೆ ಪಾಕಿಸ್ತಾನದ ಲಾಹೋರ್ನಲ್ಲಿ ಇಂದು ಭೀಕರ ಸ್ಫೋಟ ಸಂಭವಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. 
ಪಾಕಿಸ್ತಾನದ ಲಾಹೋರಿನ ಸುತ್ತಮುತ್ತ ಮೂರು ಕಡೆ ಈ ಭೀಕರ ದಾಳಿ ನಡೆದಿದೆ. ಇದನ್ನು ಕ್ಷಿಪಣಿ ದಾಳಿ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಲಾಹೋರಿನ ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟವನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಲಾಹೋರಿನ ಸುತ್ತಮುತ್ತಲಿನ ಬಂಡುಕೋರರು ಈ ದಾಳಿಯನ್ನು ನಡೆಸಿದ್ದಾರೆಯೇ ಅಥವಾ ಬಲೂಚಿಸ್ತಾನ ದಾಳಿ ನಡೆಸಿದೆಯೇ ಅಥವಾ ಭಾರತೀಯ ಸೇನೆ ಈ ದಾಳಿ ನಡೆಸಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. 

ಲಾಹೋರ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದ ಸದ್ದು ದೂರದವರೆಗೂ ಕೇಳಿಸುತ್ತಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ನಲ್ಲಿ ಸ್ಪೋಟಗಳ ಶಬ್ದಗಳು ಕೇಳಿ ಬಂದ ಬಗ್ಗೆ ಭೂ ವರದಿ ಮತ್ತು ನೆಲದ ಮೇಲಿನ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ‌. ಈ ನಡುವೆ ಲಾಹೋರಿನ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ಪಾಕಿಸ್ತಾನದಲ್ಲಿ ಉಗ್ರರು ತಾವೇ ದಾಳಿಯನ್ನು ನಡೆಸಿ ಭಾರತದ ಮೇಲೆ ದಾಳಿಯ ಹೊರೆಯನ್ನು ಹಾಕುವ ನಿಟ್ಟಿನಲ್ಲಿ ಈ ದಾಳಿಯನ್ನು ನಡೆಸಿರಬಹುದು ಎಂಬ ಬಗ್ಗೆಯೂ ಹಲವು ಅನುಮಾನಗಳು ಮೂಡುತ್ತಿವೆ. ಆದರೆ ಈ ಭೀಕರ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ. ಈ ದಾಳಿ ಹಿನ್ನೆಲೆಯಲ್ಲಿ

Post a Comment

0 Comments