ಇಲ್ಲಿಯವರೆಗೆ ಸಿಜೆಐ ಆಗಿದ್ದ ನ್ಯಾಯಮೂರ್ತಿ ಸಂಜೀವ್ ಕಣ್ಣ ಅವರು ಮಂಗಳವಾರ ವಯೋನಿಸುತ್ತಿರಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಸುಪ್ರೀಂ ಕೋರ್ಟ್ ನ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಅಧಿಕಾರವಧಿಯು ನವಂಬರ್ 23ರವರೆಗೆ ಇರಲಿದೆ. ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಸ್ವತಂತ್ರ ಭಾರತದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಬೌದ್ಧ ಧರ್ಮೀಯ. ಹಾಗೂ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಅವರ ನಂತರ ನ್ಯಾಯಾಂಗದ ಉನ್ನತ ಸ್ಥಾನಕ್ಕೇರಿದ ಎರಡನೇ ದಲಿತ ಪ್ರತಿಭೆ ಎನಿಸಿಕೊಂಡಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು ಕಾನೂನು ಸಮಾನತೆಯ ನಿಯಮ ಎತ್ತಿ ಹಿಡಿಯುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳು, ಮಾನವ ಮತ್ತು ಕಾನೂನು ಹಕ್ಕುಗಳನ್ನು ರಕ್ಷಿಸುವ ವ್ಯಾಪಕ ಶ್ರೇಣಿಯ ವಿಷಯಗಳು ಕುರಿತಂತೆ 300ಕ್ಕೂ ಅಧಿಕ ಮಹತ್ವದ ತೀರ್ಪುಗಳನ್ನು ಬರೆದಿದ್ದಾರೆ.
0 Comments